ಕಮಲ್ ಹಾಸನ್‌ರ ಹಿರಿಯ ಸಹೋದರ ನಿಧನ
ಚೆನ್ನೈ, ಮಾ. 19: ಪ್ರಸಿದ್ಧ ಚಲನ ಚಿತ್ರ ನಿರ್ಮಾಪಕ , ನಟ ಕಮಲ್ ಹಾಸನ್‌ರ ಹಿರಿಯ ಸಹೋದರ ಚಂದ್ರಹಾಸನ್ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಸಿನೆಮಾತಾರೆ ಹಾಗೂ ಪುತ್ರಿಯಾದ ಅನುಹಾಸನ್‌ರ ಲಂಡನ್‌ನ ಮನೆಯಲ್ಲಿ ಹೃದಯಾಘಾತದಿಂದ ಚಂದ್ರಹಾಸನ್ ನಿಧನರಾಗಿದ್ದಾರೆ.
ಕೆಲವು ತಿಂಗಳ ಹಿಂದೆ ಅವರ ಪತ್ನಿ ಗೀತಾ ಮಣಿ ನಿಧನರಾಗಿದ್ದರು. ರಾಜ್‌ಕಮಲ್ ಫಿಲಂಸ್‌ನ ಮೇಲ್ವಿಚಾರಕರಾಗಿದ್ದ ಅವರು ಕಮಲ್ ನಟಿಸಿದ ಹಲವು ಚಿತ್ರಗಳನ್ನು ನಿರ್ಮಿಸಿದ್ದರು.
Next Story









