ಏಳನೆ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರಿಗೆ 10ವರ್ಷ ಜೈಲು ಶಿಕ್ಷೆ

ತೊಡುಪುಝ, ಮಾರ್ಚ್ 19: ಏಳನೆತರಗತಿಯ ಹದಿಮೂರುವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪಿ ತೊಡುಪುಝದ ಶಶಿಕುಮಾರ್(42)ಗೆ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ. ಆರ್. ಮಧುಕುಮಾರ್ ಹತ್ತುವರ್ಷಜೈಲು ಶಿಕ್ಷೆ ಮತ್ತು 5000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ವಿರುದ್ಧ ಪೊಲೀಸರು ಪೊಕ್ಸೊ ಕೇಸು ದಾಖಲಿಸಿದ್ದರು. 2012ರಲ್ಲಿ ಘಟನೆ ನಡೆದಿತ್ತು. ವಿದ್ಯಾರ್ಥಿನಿ ಶಾಲೆಗೆ ಕೆಲವು ದಿವಸ ಬಂದಿರಲಿಲ್ಲ. ಈ ಕುರಿತು ತರಗತಿ ಟೀಚರ್ ವಿಚಾರಿಸಿದಾಗ ತನ್ನನ್ನು ಆರೋಪಿ ಅತ್ಯಾಚಾರ ಮಾಡಿದ ವಿಷಯವನ್ನು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಆ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣವನ್ನು ಎಸೈಗಳಾದ ಬೇಬಿ ಜಾನ್, ಎಂಟಿ ಥಾಮಸ್, ಸರ್ಕಲ್ ಇನ್ಸ್‌ಪೆಕ್ಟರ್ ಸಜಿ ಮಾರ್ಕೊಸ್ ತನಿಖೆ ನಡಸಿದ್ದರು. ಫಿಯೊರ್ದಿನ್‌ಗಾಗಿ ವಿಶೇಷ ಅಭಿಯೋಜಕ ಟಿ.ಎ. ಸಂತೋಷ್ ತೇವರ್‌ಕುನ್ನೇಲ್, ವಕೀಲರಾಧ ಎಚ್. ಕೃಷ್ಣಕುಮಾರ್ ಹಾಜರಾಗಿದ್ದರು.
Next Story





