ದರೋಡೆ ಪ್ರಕರಣ: ತ್ರಿಶೂರ್‌ಗೆ ಪೊಲೀಸ್ ತಂಡ
ಹಿರಿಯಡ್ಕ, ಮಾ.18: ಕೇರಳದ ಚಿನ್ನಾಭರಣ ವ್ಯಾಪಾರಿಯನ್ನು ಅಪ ಹರಿಸಿ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ರಚಿಸಲಾದ ಮೂರು ತಂಡಗಳ ಪೈಕಿ ಒಂದು ತಂಡ ಉದ್ಯಮಿ ದೀಲಿಪ್ ಟಿ.ಡಿ. ಅವರ ಊರು ತ್ರಿಶೂರ್‌ಗೆ ಪ್ರಯಾಣ ಬೆಳೆಸಿ, ಮಾಹಿತಿ ಕಳೆ ಹಾಕುತ್ತಿದೆ. ಇನ್ನೊಂದು ತಂಡ ದಿಲೀಪ್ ಚಿನ್ನಾಭರಣ ಮಾರಾಟ ಮಾಡಿದ ಅಂಗಡಿಗಳಿಗೆ ತೆರಳಿ ವಿಷಯ ಸಂಗ್ರಹಿಸುತ್ತಿದೆ. ಅದೇ ರೀತಿ ಮೂರನೆ ತಂಡ ಸಿಸಿಟಿವಿ ಫೂಟೇಜ್, ಆತ ತೆರಳಿದ ಬಸ್‌ಗಳಲ್ಲಿನ ಮಾಹಿತಿಯನ್ನು ಹುಡುಕಾಟುತ್ತಿದೆ. ಈವರೆಗೆ ಆರೋಪಿಗಳಿಗೆ ಸಂಬಂಧಿಸಿ ದಂತೆ ಯಾವುದೇ ಮಾಹಿತಿ ದೊರೆ ತಿಲ್ಲ ಎಂದು ತಿಳಿದುಬಂದಿದೆ.
ಚಿನ್ನಾಭರಣಗಳನ್ನು ಮಾರಾಟ ಮಾಡಿರುವ ಕುರಿತ ಬಿಲ್‌ಗಳನ್ನು ನೀಡುವ ವಂತೆ ಪೊಲೀಸರು ದೀಲಿಪ್ ಟಿ.ಡಿ. ನೋಟೀಸ್ ನೀಡಿದ್ದಾರೆ. ಆದರೆ ಅವರು ಈವರೆಗೆ ಬಿಲ್‌ಗಳನ್ನು ನೀಡಿಲ್ಲ ಎಂದು ತಿಳಿದುಬಂದಿದೆ. ಅದೇ ರೀತಿ ಜ್ಯುವೆಲ್ಲರ್ಸ್‌ಗಳಿಂದಲೂ ಬಿಲ್‌ಗಳನ್ನು ಪೊಲೀಸರು ಕೇಳಿದ್ದಾರೆ ಎನ್ನ ಲಾಗಿದೆ.
Next Story





