ಬೈಕಿನಿಂದ ಬಿದ್ದು ಸಹಸವಾರ ಮೃತ್ಯು
ಬ್ರಹ್ಮಾವರ, ಮಾ.19: ಬೈಕ್‌ನಿಂದ ಬಿದ್ದು ಸಹಸವಾರರೊಬ್ಬರು ಮೃತಪಟ್ಟ ಘಟನೆ ಚೇರ್ಕಾಡಿ ಗ್ರಾಮದ ಪೇತ್ರಿ ಗುಂಡಾರಿಕಲ್ಲು ಎಂಬಲ್ಲಿ ಮಾ.18 ರಂದು ಸಂಜೆ 4.30ರ ಸುಮಾರಿಗೆ ನಡೆದಿದೆ.
ಪಿರ್ಯಾದಿದಾರರಾದ ಗುಂಡು ನಾಯ್ಕ (48) ತಂದೆ:ಕೂರ್ಗು ನಾಯ್ಕ, ವಾಸ:ಗುಂಡಾರಿಕಲ್ಲು, ಪೇತ್ರಿ, ಚೇರ್ಕಾಡಿ ಗ್ರಾಮ ಮತ್ತು ಅಂಚೆರವರು ಅವರ ಅಂಗಡಿ ಮುಂದೆ ಇದ್ದಾಗ ಹೆಬ್ರಿ ಬ್ರಹ್ಮಾವರ ರಸ್ತೆಯಲ್ಲಿ ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆ ವಿಠಲ ಮರಕಾಲ ಸವಾರಿ ಮಾಡಿ ಕೊಂಡು ಬರುತ್ತಿದ್ದ ಬೈಕ್‌ಗೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಕುಳಿತಿದ್ದ ಸಂಜೀವ ನಾಯ್ಕ್(65) ಎಂಬವರು ಆಯತಪ್ಪಿ ರಸ್ತೆಗೆ ಬಿದ್ದರು.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





