ಪಾಕಿಸ್ತಾನದ ವಿರುದ್ಧ ಟ್ವೆಂಟಿ-20 ಸರಣಿಗೆ ವಿಂಡೀಸ್ ತಂಡ ಪ್ರಕಟ
ಆ್ಯಂಟಿಗುವಾ, ಮಾ.19: ಪಾಕಿಸ್ತಾನದ ವಿರುದ್ಧ ಮಾ.26 ರಿಂದ ಆರಂಭವಾಗಲಿರುವ 4 ಪಂದ್ಯಗಳ ಟ್ವೆಂಟಿ-20 ಸರಣಿಗೆ ಕಿರೊನ್ ಪೊಲಾರ್ಡ್, ಸುನೀಲ್ ನರೇನ್, ಲೆಂಡ್ಲ್ ಸಿಮೊನ್ಸ್ ಹಾಗೂ ಸ್ಯಾಮುಯೆಲ್ ಬದ್ರಿ ಅವರನ್ನು ಆಯ್ಕೆ ಮಾಡಿದೆ.
ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿ ಶನಿವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಈ ನಾಲ್ವರು ಆಟಗಾರರು ಸರಣಿಯ ಎಲ್ಲ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಹೇಳಿದೆ. ಡ್ವೆಯ್ನೆ ಬ್ರಾವೊ ಗಾಯಗೊಂಡಿದ್ದು, ಆ್ಯಂಡ್ರೆ ರಸೆಲ್ ನಿಷೇಧವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ವಿಂಡೀಸ್ ತಂಡಕ್ಕೆ ಇಬ್ಬರು ವಿಶ್ವಶ್ರೇಷ್ಠ ಆಲ್ರೌಂಡರ್ಗಳ ಅನುಪಸ್ಥಿತಿ ಕಾಡುತ್ತಿದೆ.
ವಿಂಡೀಸ್ ಸೆಪ್ಟಂಬರ್ನಲ್ಲಿ ಪಾಕ್ ವಿರುದ್ಧವೇ ಕೊನೆಯ ಟ್ವೆಂಟಿ-20 ಪಂದ್ಯ ಆಡಿತ್ತು. ಮಾ.26 ರಂದು ಮೊದಲ ಪಂದ್ಯ ನಡೆದ ಬಳಿಕ ಮಾ.30, ಎ.1 ಹಾಗೂ 2 ರಂದು ಉಳಿದ ಪಂದ್ಯಗಳು ನಡೆಯಲಿವೆ.
ವೆಸ್ಟ್ಇಂಡೀಸ್ ಟ್ವೆಂಟಿ-20 ತಂಡ:
ಸ್ಯಾಮುಯೆಲ್ ಬದ್ರಿ, ಕಾರ್ಲೊಸ್ ಬ್ರಾತ್ವೇಟ್(ನಾಯಕ), ಜೋನಾಥನ್ ಕಾರ್ಟರ್, ಆ್ಯಂಡ್ರೆ ಫ್ಲೆಚರ್, ಜೇಸನ್ ಹೋಲ್ಡರ್, ಎವಿನ್ ಲೂವಿಸ್, ಜೇಸನ್ ಮುಹಮ್ಮದ್, ಸುನೀಲ್ ನರೇನ್, ವೀರಸ್ವಾಮಿ ಪೆರುಮಾಳ್, ಕಿರೊನ್ ಪೊಲಾರ್ಡ್, ರೊವ್ಮಾನ್ ಪೊವೆಲ್, ಮರ್ಲಾನ್ ಸ್ಯಾಮುಯೆಲ್ಸ್, ಲೆಂಡ್ಲ್ ಸಿಮೊನ್ಸ್, ಜೆರೊಮ್ ಟೇಲರ್, ಚಾಡ್ವಿಕ್ ವಾಲ್ಟನ್, ಕೆಸ್ವಿಕ್ ವಿಲಿಯಮ್ಸ್.