ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಮಂಗಳೂರಿನ ನಂಟು

ಮಂಗಳೂರು, ಮಾ.೨೦: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2016ರಲ್ಲಿ ಕದ್ರಿ ಜೋಗಿ ಮಠದ "ಪರ್ಯಾಯ ರಾಜ ಪಟ್ಟಾಭೀಷೇಕ ಮಹೋತ್ಸವ" ಕ್ಕೆ ಮಂಗಳೂರಿಗೆ ಆಗಮಿಸಿದ್ದರು.
ಈ "ಪರ್ಯಾಯ ರಾಜ ಪಟ್ಟಾಭೀಷೇಕ ಮಹೋತ್ಸವ"ವು 2016 ಮಾ.6 ಮತ್ತು 7 ರಂದು ನಡೆದಿತ್ತು. ಈ ಎರಡು ದಿನ ಮಠದಲ್ಲೇ ವಾಸ್ತವ್ಯ ಹೂಡಿ ಕಾರ್ಯಕ್ರಮದ ರೂಪುರೇಷೆ ವಹಿಸಿದ್ದರು.
"ರಾಜ"ಯೋಗಿಯನ್ನು ಆಯ್ಕೆ ಮಾಡುವುದು ಇವರೇ:
ಕದ್ರಿಯಲ್ಲಿ ಇರುವ ಯೋಗೇಶ್ವರ ಮಠವು ನಾಥ ಸಂಪ್ರದಾಯದ ಮಠವಾಗಿದೆ. ಇಲ್ಲಿ ಏಕೈಕ "ರಾಜ"ಯೋಗಿ ಇದ್ದಾರೆ. ಅವರನ್ನು ಆಯ್ಕೆ ಮಾಡುವುದು ಯೋಗಿ ಆದಿತ್ಯನಾಥ್ ಅವರೇ. ಈ ಮಠದ ಇಬ್ಬರು ರಾಜಯೋಗಿಗಳನ್ನು ಆದಿತ್ಯನಾಥರು ಆಯ್ಕೆ ಮಾಡಿದ್ದಾರೆ.
ನಾಥ ಪಂಥದ ಅಧ್ಯಕ್ಷರಾದ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಾತ್ರಿಯಾಗಿರುವುದು ಸಂತಸ ತಂದಿದೆ ಎಂದು ಯೋಗೇಶ್ವರ ಮಠದ ಶ್ರೀ ನಿರ್ಮಾಲಾನಾಥ್ ಜೀ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Next Story





