"ಭಂಡಾರಿ ವರ್ಟಿಕಾ" ವಸತಿ ಸಮುಚ್ಚಯ ಕಾಮಗಾರಿ ಚಾಲನಾ ಸಮಾರಂಭದಲ್ಲಿ ಸುನಿಲ್ ಗ್ರೊವರ್ ಕಾಮಿಡಿ ನೈಟ್

ಮಂಗಳೂರು, ಮಾ.20: ದಕ್ಷಿಣ ಭಾರತದ ಅತ್ಯಂತ ಎತ್ತರದ ಜನವಸತಿ ಕಟ್ಟಡ "ಭಂಡಾರಿ ವರ್ಟಿಕಾ" ವಸತಿ ಸಮುಚ್ಚಯ ಕಾಮಗಾರಿ ಚಾಲನಾ ಸಮಾರಂಭದಲ್ಲಿ ಸುನಿಲ್ ಗ್ರೊವೆರ್ ಅವರಿಂದ ಕಾಮಿಡಿ ನೈಟ್ ಕಾರ್ಯಕ್ರಮ ನಡೆಯಿತು.
ಸುಂದರ ಸಮಾರಂಭದಲ್ಲಿ ಹಲವಾರು ಹಾಸ್ಯ ಘಟನೆಗಳನ್ನು ಹಂಚಿಕೊಳ್ಳುತ್ತಾ ಜನರನ್ನು ನಗೆಗಡಲಿನಲ್ಲಿ ತೇಲಿಸಿದರು.
ಹಾಸ್ಯನಟ ಸುನಿಲ್ ಗ್ರೋವರ್ "ಕಾಮಿಡಿ ನೈಟ್ಸ್ ವಿತ್ ಕಪಿಲ್" ಕಾಮಿಡಿ ಶೋನಲ್ಲಿ ಡಾ.ಮಶೂರ್ ಗುಲಾಟಿ, ರಿಂಕೂ ದೇವಿ, ಗುತ್ತಿ ಪಾತ್ರಗಳನ್ನು ನಿರ್ವಹಿಸಿ ಖ್ಯಾತರಾಗಿದ್ದಾರೆ. ಅದಲ್ಲದೆ, ಬಾಲಿವುಡ್ ನ "ಕಾಫಿ ವಿತ್ ಡಿ", "ಗಬ್ಬರ್ ಇಸ್ ಬ್ಯಾಕ್", "ಗಜನಿ", "ದ ಲೆಜೆಂಡ್ ಆಫ್ ಭಗತ್ ಸಿಂಗ್" ಸಿನೆಮಾದಲ್ಲಿ ನಟಿಸಿದ್ದಾರೆ.
ಅದಲ್ಲದೇ, ಸಮಾರಂಭದಲ್ಲಿ ಕನ್ನಡ ಸಂಗೀತ ಹಾಡುಗಾರರಾದ ಹೇಮನಾಥ, ಅಜಯ್ ವಾರಿಯರ್, ಸುಪ್ರೀಯಾ ಲೋಹಿತ್ ಅವರಿಂದ ಸಂಗೀತ ರಸಮಂಜರಿ ಜರಗಿತು.
Next Story





