ಉಷ್ಣತೆಯಲ್ಲಿ ಹೆಚ್ಚಳ: ಕೇರಳದಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆ
ತಿರುವನಂತಪುರಂ, ಮಾ. 20: ಕೇರಳದಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು, ಬಿಸಿಲಿನಲ್ಲಿ ಕೆಲಸಮಾಡುವವರಿಗೆ ಮಧ್ಯಾಹ್ನ 12ರಿಂದ 3 ಗಂಟೆವರೆಗೆ ವಿಶ್ರಾಂತಿ ನೀಡಲಾಗಿದೆ. ಹಗಲು ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಎಪ್ರಿಲ್ 30ರವರೆಗೆ ಮಧ್ಯಾಹ್ನ ಹನ್ನೆರಡರಿಂದ ಮಧ್ಯಾಹ್ನ ಮೂರುಗಂಟೆಯವರೆಗೆ ವಿಶ್ರಾಂತಿ ಪಡೆಯಬಹುದು. ಆದರೆ ಅವರ ಕೆಲಸ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿ ಸಂಜೆ ಏಳು ಗಂಟೆವರೆಗೆ ಮುಂದುವರಿಯುತ್ತದೆ ಎಂದು ಕಾರ್ಮಿಕ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಬಿಸಿಲಿನ ತಾಪ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಸೂರ್ಯಾಘಾತ ಸಾಧ್ಯತೆಯಿರುವುದರಿಂದ ವಿಶ್ರಾಂತಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮವನ್ನು ಆರೋಗ್ಯ ಇಲಾಖೆ ಸೂಚಿಸಿದೆ. ಬಿಸಿಲಿನ ಝಳದಿಂದ ಪಾರಾಗಲು ಧಾರಾಳ ನೀರು ಕುಡಿಯಬೇಕು. ಹತ್ತಿಯ ಬಟ್ಟೆಗಳನ್ನು ಧರಿಸಬೇಕು. ಹಣ್ಣುಗಳನ್ನು ತಿನ್ನಬೇಕು ಇತ್ಯಾದಿ ಸಲಹೆಗಳನ್ನು ಆರೋಗ್ಯ ಇಲಾಖೆ ನೀಡಿದೆ.
Next Story