ವಿಶ್ವಾಸಮತ ಗೆದ್ದ ಮಣಿಪುರ ಸಿಎಂ ಬಿರೇನ್
.jpg)
ಇಂಫಾಲ, ಮಾ.20: ಮಣಿಪುರ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಿರೇನ್ ಸಿಂಗ್
ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
60 ಸದಸ್ಯರಿರುವ ವಿಧಾನಸಭೆಯಲ್ಲಿ 21 ಶಾಸಕರನ್ನು ಹೊಂದಿರುವ ಬಿಜೆಪಿಗೆ ನಾಗ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಸೇರಿದಂತೆ ಸ್ಥಳೀಯ ಪಕ್ಷಗಳ ಶಾಸಕರು ಆಡಳಿತಾರೂಡ ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಬೀರೆನ್ ವಿಶ್ವಾಸಮತ ಜಯಿಸಿದ್ದಾರೆ.
ಮಾ.15 ರಂದು ಮಣಿಪುರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿರೇನ್ ಸಿಂಗ್ ಗೆ ಮಾ.20 ರಂದು ಬಹುಮತ ಸಾಬೀತುಪಡಿಸುವಂತೆ ಮಣಿಪುರರದ ರಾಜ್ಯಪಾಲರು ಸೂಚಿಸಿದ್ದರು.
Next Story