ಆದಿತ್ಯನಾಥ್ ವಿರುದ್ಧ ಗುಡುಗಿದ ಪಿಣರಾಯಿ
ಹೈದರಾಬಾದ್,ಮಾ. 20: ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆದಿತ್ಯನಾಥ್ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಠಿಣ ಟೀಕಾಸ್ತ್ರ ಎಸೆದಿದ್ದಾರೆ.
ಕೋಮುಗಲಭೆ ಸೃಷ್ಟಿಸಿ ಅಧಿಕಾರ ಕಿತ್ತುಕೊಳ್ಳುವ ಬಿಜೆಪಿಯ ನಿಲುವು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಆದಿತ್ಯನಾಥ್‌ರ ಮುಖ್ಯಮಂತ್ರಿ ಸ್ಥಾನ ಪುರಾವೆಯಾಗಿದೆ. ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ನಗ್ನವಾಗಿ ಉಲ್ಲಂಘಿಸುವ ಒಂದು ಪಕ್ಷಕ್ಕೆ ಮಾತ್ರ ಇಂತಹ ಒಬ್ಬರನ್ನುಮುಖ್ಯಮಂತ್ರಿನ್ನಾಗಿ ಮಾಡಲು ಸಾಧ್ಯ ಎಂದು ಪಿಣರಾಯಿ ವಿಜಯನ್ ಹೈದರಾಬಾದ್‌ನ ಕೇರಳ ಸಮಾಜದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡುತ್ತಾ ಹೇಳಿದ್ದಾರೆ.
Next Story









