ಮಗು ಸಾವು: ಸಂಬಂಧಿಕರಿಂದ ವೈದ್ಯರ ಹಲ್ಲು ಮುರಿತ

ಮಾಲೂರು, ಮಾ.20: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಮಗುವಿನ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಪಟ್ಟಣದ ಮಾಲೂರು ಹೊಸೂರು ರಸ್ತೆಯಲ್ಲಿರುವ ಡಾ.ರಮೇಶ್ ಮಕ್ಕಳ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗಾಗಿ 2ತಿಂಗಳ ಮಗುವನ್ನು ದಾಖಲೆ ಮಾಡಲಾಗಿತ್ತು. ಆದರೆ, ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಮಗುವಿನ ಸಂಬಂಧಿಕರು ಏಕಾಏಕಿ ಆಸ್ಪತ್ರೆ ಮೇಲೆ ದಾಳಿ ಮಾಡಿ, ಡಾ.ರಮೇಶ್ ಅವರ ಮೇಲೆ ಹಲ್ಲೆ ಮಾಡಿದ ಪರಿಣಾಮ ವೈದ್ಯರ ಎರಡು ಹಲ್ಲುಗಳು ಹಾನಿಯಾಗಿರುವ ಘಟನೆ ನಡೆದಿದೆ.
ವೈದ್ಯರು ಮಗುವಿನ ಸಂಬಂಧಿಕರನ್ನು ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
Next Story





