ಮಂಗಳೂರು ನಗರದಾದ್ಯಂತ 6 ಕೋ.ರೂ. ವೆಚ್ಚದಲ್ಲಿ ಅಂಡರ್‌ಗ್ರೌಂಡ್ ಕೇಬಲ್

ಮಂಗಳೂರು, ಮಾ.20: ಸುಮಾರು 6 ಕೋ.ರೂ. ವೆಚ್ಚದಲ್ಲಿ ಮಂಗಳೂರಿಗೆ ಅಂಡರ್‌ಗ್ರೌಂಡ್ ಕೇಬಲ ಅಳವಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಈ ಯೋಜನೆಗೆ 6 ಕೋ.ರೂ. ವ್ಯಯಿಸಲಾಗುವುದು. 2ನೆ ಹಂತದಲ್ಲಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೆ ಕ್ರಮ ಜರಗಿಸಲಾಗುವುದು ಎಂದು ಲೋಬೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈವರೆಗೆ ಇಲೆಕ್ಟ್ರಿಕಲ್ ಕೇಬಲಗಳನ್ನು ಮೇಲಿನಿಂದಲೇ ಅಳವಡಿಸುವ ಕ್ರಮವಿತ್ತು. ಇದನ್ನು ಅಂಡರ್‌ಗ್ರೌಂಡ್‌ನಲ್ಲಿ ಅಳವಡಿಸಿದರೆ ಸುರಕ್ಷಿತ ಎನ್ನುವ ಕಾರಣದಿಂದ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕರಾವಳಿ ಸರ್ಕಲ್ ನಿಂದ ಬೆಂದೂರವೆಲ್ ಹಂಪನಕಟ್ಟೆ ಮೂಲಕ ಎ.ಬಿ.ಶೆಟ್ಟಿ ಸರ್ಕಲ್ ವರೆಗೆ ನಡೆಯುವ ಕಾಮಗಾರಿಯ ಉಸ್ತುವಾರಿಯನ್ನು ಮೆಸ್ಕಾಂ ಎಇ ಮಂಜಪ್ಪ ನೋಡಿಕೊಳ್ಳುತ್ತಿದ್ದಾರೆ.
Next Story





