ದ.ಕ. ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಮನವಿ

ಮಂಗಳೂರು, ಮಾ.20: ಗಿಲ್‌ನೆಟ್ ಮತ್ತು ನಾಡದೋಣಿಗಳಿಗೆ ಪ್ರತೀ ತಿಂಗಳು ನೀಡುವ ಸೀಮೆಎಣ್ಣೆಯ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡುವುದನ್ನು ವಿರೋಧಿಸಿ ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕ ಮಹೇಶ್ ಕುಮಾರ್‌ಗೆ ಮನವಿ ಸಲ್ಲಿಸಿ ಮೀನುಗಾರಿಕಾ ಇಲಾಖೆ ಇದನ್ನು ಸ್ಪಂದಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದೆ.
ಸಂಘದ ಅಧ್ಯಕ್ಷ ಅಲಿ ಹಸನ್, ಪ್ರಧಾನ ಕಾರ್ಯದರ್ಶಿ ಬಿ.ಎ.ಬಶೀರ್, ಉಪಕಾರ್ಯದರ್ಶಿ ಸುಭಾಶ್ ಕಾಂಚನ್, ಸದಸ್ಯರಾದ ಹೈದರ್, ಮಮ್ಮಿಕುಂಞಿ, ಒ.ಕೆ. ಅಬ್ಬು, ರಿಯಾಝ್ ನಿಯೋಗದಲ್ಲಿದ್ದರು.
Next Story





