ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವಂತಾಗಬೇಕು: ಪ್ರದೀಪ್ ಕುಮಾರ್ ಕಲ್ಕೂರ
ಕರ್ನಾಟಕ ಏಕೀಕರಣ ಸಾಹಿತ್ಯ ಸಮ್ಮೇಳನ

ಪುತ್ತೂರು, ಮಾ.20: ದೇಶದಲ್ಲಿ ಏಕರೂಪ ಶಿಕ್ಷಣ ಜಾರಿಗೆ ಬಂದರೆ ಮಾತ್ರ ನಮ್ಮ ಪಾರಂಪರಿಕ ಪ್ರಭುತ್ವ ಉಳಿಯಲು ಸಾಧ್ಯ. ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವಂತಾಗಬೇಕು ಎಂದು ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಪಾಣಾಜೆ ಪ್ರಾಥಮಿಕ ಶಾಲೆಯ ಕೆದಂಬಾಡಿ ಜತ್ತಪ್ಪ ರೈ ಸಭಾಂಗಣದಲ್ಲಿ ನಡೆದ ಕರ್ನಾಟಕ ಏಕೀಕರಣ ಸಾಹತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ನೆಲ, ಜಲ , ಸಂಸ್ಕೃತಿ , ಆಚಾರ ವಿಚಾರಗಳನ್ನು ಒಳಗೊಂಡ ಶಿಕ್ಷಣ ಇಂದಿನ ತಲೆಮಾರಿಗೆ ಅಗತ್ಯವಾಗಿದೆ. ಕನ್ನಡ ಶಾಲೆಗಳಿಗೆ ಬೇಕಾಗಿರುವ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಕನ್ನಡಾಭಿಮಾನಿಗಳು ಒಂದಾಗಬೇಕು ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಎನ್ ರಘುನಾಥ ರೈ ನುಳಿಯಾಲು ಮಾತನಾಡಿ ಕನ್ನಡ ಭಾಷೆ ಅಭಿವೃದ್ದಿಯಾಗಬೇಕಾದರೆ ಮಹಾಜನ್ ವರದಿ ಜಾರಿಯಾಗಬೇಕು. ಕನ್ನಡದ ಉಳಿವಿಗಾಗಿ ಅನೇಕ ವಿದ್ವಾಂಸರು ಸಾಹಿತಿಗಳು ಹೋರಾಟವನ್ನು ನಡೆಸಿದ್ದಾರೆ. ಕರ್ನಾಟಕ ಏಕೀಕರಣ ಹೋರಾಠದಲ್ಲಿ ಪ್ರಮುಖ ಪಾತ್ರ ವಹಿಸಿದ ಹಲವಾರಿ ಕವಿ , ಸಾಹಿತಿಗಳ ಕಿಚ್ಚನ್ನು ವಿವಿರಿಸಿದ ಅವರು ಕರ್ನಾಟಕ ಏಕೀಕರಣಕ್ಕೆ ಸಾಹಿತ್ಯ ಸಮ್ಮೇಳನ ನಾಂದಿಯಾಗಲಿ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪುಸ್ತಕವ ಪ್ರದರ್ಶವನ್ನು ಉದ್ಘಾಟಿಸಿದರು.
ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ತಾಪಂ ಸದಸ್ಯೆ ಮೀನಾಕ್ಷಿ ಮಂಜುನಾಥ, ಪಾಣಾಗೆ ಗ್ರಾಪಂ ಪಿಡಿಒ ಸುರೇಂದ್ರ ರೈ, ಗ್ರಾಪಂ ಅಧ್ಯಕ್ಷ ನಾರಾಯಣ ಪೂಜಾರಿ, ಜಿಪ್ಪಾ ಕಸಾಪ ಕಾರ್ಯದರ್ಶಿ ತಮ್ಮಯ್ಯ ಉಪಸ್ಥಿತರಿದ್ದರು.
ಸಮ್ಮೇಳನದ ಸ್ವಾಘತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಎಸ್. ಆರ್ಲಪದವು ಸ್ವಾಗತಿಸಿದರು. ಸಹಶಿಕ್ಷಕಿ ಸತ್ಯವತಿ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶೀಲಾವತಿ ವಂದಿಸಿದರು. ಶಿಕ್ಷಕಿ ಸರೋಜಿನಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.







