Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮರಳು ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ:...

ಮರಳು ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ: ಲಾರಿ ಮಾಲಕರ ದರ್ಬಾರು

ಅಕ್ರಮ ಮರಳು ಗಣಿಗಾರಿಕೆಗೆ ಜಿಲ್ಲಾಡಳಿತ ಕಡಿವಾಣ ಹಾಕೋದು ಯಾವಾಗ?

ಅಝೀಝ್ ಕಿರುಗುಂದಅಝೀಝ್ ಕಿರುಗುಂದ20 March 2017 11:23 PM IST
share
ಮರಳು ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ: ಲಾರಿ ಮಾಲಕರ ದರ್ಬಾರು

ಚಿಕ್ಕಮಗಳೂರು, ಮಾ.20: ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯಿಂದ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದರ ಜೊತೆಗೆ ಲಾರಿ ಮಾಲಕರು ಸರಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚಾಗಿ ಹಣ ವಸೂಲಿ ಮಾಡುತ್ತಿರುವ ಆರೋಪ ಮರಳು ಗ್ರಾಹಕರಿಂದ ವ್ಯಕ್ತವಾಗಿದೆ.


  ಆಶ್ರಯ ಸಹಿತ ವಿವಿಧ ವಸತಿ ಫಲಾನುಭವಿಗಳಿಗೆ, ಇತರ ಮನೆ, ವಿವಿಧ ಕಟ್ಟಡ ಕಾಮಗಾರಿಗಳಿಗೆ ಕಳೆದ ತಿಂಗಳಿನಿಂದ ಗ್ರಾಹಕರಿಗೆ ಮರಳು ವಿತರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಅದರಂತೆ ತಾಲೂಕಿನ ಹಿರೇಶಿಗರ, ಕಣಚೂರು, ಜಿ.ಅಗ್ರಹಾರ, ಚಕ್ಕುಡಿಗೆಯಲ್ಲಿನ ಸ್ಟಾಕ್‌ಯಾರ್ಡ್‌ನಿಂದ ಗ್ರಾಹಕರಿಗೆ ಮರಳು ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಮರಳು ಸಾಗಿಸುವ ಲಾರಿ ಮಾಲಕರು ಮನಸ್ಸಿಗೆ ಬಂದಂತೆ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲಾರಿ ಮಾಲಕರ ಸಭೆ ನಡೆಸಿದ್ದರು.


  ತಾಲೂಕಿನ ಸ್ಟಾಕ್ ಯಾರ್ಡ್‌ನಲ್ಲಿರುವ ಮರಳು ಸಾಗಿಸಲು ಮೂಡಿಗೆರೆ ಪಟ್ಟಣದ ಸುತ್ತ ಮುತ್ತಲಿನ ಪ್ರದೇಶಗಳಿಗೆ 4,500 ರೂ, ಚಿಕ್ಕಮಗಳೂರು ನಗರಕ್ಕೆ 6,500 ರೂ, ತರೀಕೆರೆಗೆ 7,500 ರೂ. ನಿಗದಿಪಡಿಸಲಾಗಿದೆ. ಆದರೆ ಜಿಲ್ಲಾಧಿಕಾರಿ ಆದೇಶವನ್ನು ಲಾರಿ ಮಾಲಕರು ಮತ್ತು ಚಾಲಕರು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿ ಬಂದಿದೆ.   
   ಗ್ರಾಹಕರಿಗೆ ಮರಳು ವಿತರಣೆಗೆ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪರವಾನಿಗೆ ಸಿಕ್ಕ ಬಳಿಕ ಅರ್ಜಿದಾರರಿಗೆ ಮತ್ತು ಲಾರಿ ಮಾಲಕರ ಮೊಬೈಲ್‌ಗಳಿಗೆ ಮೆಸೇಜ್ ಕಳಿಸಲಾಗುತ್ತದೆ. ಇಂತಹ ಮೆಸೇಜ್ ಪಡೆಯುವ ಲಾರಿ ಮಾಲಕರು ಗ್ರಾಹಕರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ನಿಮಗೆ ಮರಳು ಪರವಾನಿಗೆ ಸಿಕ್ಕಿದೆ.

ನಮ್ಮ ಲಾರಿಯಲ್ಲಿ ಮೂಡಿಗೆರೆ ಪಟ್ಟಣಕ್ಕೆ ಮರಳು ಹಾಕಲು 5,000 ಸಾವಿರ ರೂ, ಅನ್‌ಲೋಡ್‌ಗೆ 750 ರೂ, ಡ್ರೈವರ್ ಭತ್ತೆ 300 ರೂ. ಕೊಡಬೇಕು. ಲಾರಿಯಲ್ಲಿ ಫುಲ್ ಲೋಡ್ ಮಾಡಿಸಿಕೊಂಡು ಬರಬೇಕೆಂದರೆ ಹೆಚ್ಚುವರಿ ಬಾಡಿಗೆ 3,000 ರೂ. ಮತ್ತು ಸ್ಟಾಕ್‌ಯಾರ್ಡ್‌ನಲ್ಲಿ ಮರಳು ಹಾಕುವವರಿಗೆ 3,000 ರೂ. ಹೆಚ್ಚುವರಿಯಾಗಿ ಕೊಟ್ಟರೆ ತರುತ್ತೇವೆ ಇಲ್ಲವಾದರೆ ಮಾಮೂಲಿ 6,000 ಸಾವಿರ ರೂ ಕೊಡಬೇಕು ಎಂದು ಲಾರಿ ಮಾಲಕರು ಅಥವಾ ಚಾಲಕರು ಹಗಲು ದರೋಡೆ ಮಾಡುತ್ತಿರುವ ಆರೋಪ ಮರಳು ಗ್ರಾಹಕರದ್ದಾಗಿದೆ.

ವುರಳು ಗುತ್ತಿಗೆದಾರರು, ಅಧಿಕಾರಿಗಳು, ಲಾರಿ ಮಾಲಕರು ಮತ್ತು ಚಾಲಕರು ಪರಸ್ಪರ ಶಾಮೀಲಾಗಿ ಒಂದೇ ಪರ್ಮಿಟ್‌ನಲ್ಲಿ 4/5 ಲೋಡ್ ಮರಳು ಸಾಗಿಸುತ್ತಿದ್ದಾರೆ. ರಾಜಸ್ವ ನಂಬಿರುವ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ತಹಶೀಲ್ದಾರ್‌ರಾಗಲೀ, ಪೊಲೀಸ್ ಇಲಾಖೆಯಾಗಲೀ, ಸಂಬಂಧಿಸಿದ ಯಾವ ಅಧಿಕಾರಿಗಳೂ ಕೂಡ ಅಕ್ರಮ ಮರಳು ಸಾಗಾಟದ ವಿರುದ್ಧ ಕ್ರಮ ಜರಗಿಸುತ್ತಿಲ್ಲ. ಪೊಲೀಸರು ಅಲ್ಲಲ್ಲಿ ನಿಂತು ಲಾರಿಯನ್ನು ತಪಾಸಣೆ ಮಾಡುತ್ತಿದ್ದರೂ ಅಕ್ರಮ ಸಾಗಾಟಗಾರರು ಪೊಲೀಸರನ್ನು ತಪ್ಪಿಸಿ, ಮಾರ್ಗ ಬದಲಿಸಿ ಅಥವಾ ಪೊಲೀಸರು ಇಲ್ಲದ ಸಮಯ ನೋಡಿಕೊಂಡು ಸಾಗಿಸುತ್ತಿದ್ದಾರೆ.

share
ಅಝೀಝ್ ಕಿರುಗುಂದ
ಅಝೀಝ್ ಕಿರುಗುಂದ
Next Story
X