10ನೆ ತರಗತಿಯ ಪರೀಕ್ಷೆ ಬರೆದ 70 ವರ್ಷದ ವ್ಯಕ್ತಿ!

ಅಹ್ಮದಾಬಾದ್, ಮಾ.21: ಸುಮಾರು 55 ವರ್ಷಗಳ ಹಿಂದೆ ಶಿಕ್ಷಣವನ್ನು ಮೊಟಕುಗೊಳಿಸಿದ್ದ, ಏಳು ಮಕ್ಕಳ ತಂದೆಯಾಗಿರುವ 70ರ ಪ್ರಾಯದ ಪರ್ಬಾತ್ ಮಕ್ವಾನ ಎಂಬುವವರು 10ನೆ ತರಗತಿಯ ಪರೀಕ್ಷೆ ಬರೆಯಲು ನಿರ್ಧರಿಸಿದ್ದು, ಅವರ ಈ ದಿಟ್ಟ ನಿರ್ಧಾರಕ್ಕೆ ವಯಸ್ಸು ಅಡ್ಡಿಯಾಗಿಲ್ಲ.
ಹಳ್ಳಿಯ ಜನರ ಸೇವೆ ಮಾಡುವ ಉದ್ದೇಶದಿಂದ ಈ ವಯಸ್ಸಿನಲ್ಲಿ 10ನೆ ತರಗತಿಯ ಪರೀಕ್ಷೆ ಬರೆಯಲು ಮಕ್ವಾನ ನಿರ್ಧರಿಸಿದ್ದಾರೆ. ಜುನಗಡ ಜಿಲ್ಲೆಯ ಮಕ್ವಾನ ಪ್ರಸ್ತುತ ವಿದ್ಯಾರ್ಥಿಗಳ ಹಾಸ್ಟೆಲ್‌ನ್ನು ನಡೆಸುತ್ತಿದ್ದು, ಜುನಗಢ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘‘ಕಳೆದ ಕೆಲವು ವರ್ಷಗಳಲ್ಲಿ ಶಿಕ್ಷಣದ ಸ್ವರೂಪದಲ್ಲಿ ಭಾರೀ ಬದಲಾವಣೆಯಾಗಿದ್ದು, ಸುಮಾರು 50 ವರ್ಷಗಳ ಬಳಿಕ ಶಿಕ್ಷಣವನ್ನು ಮುಂದುವರಿಸುವುದು ಸವಾಲಿನ ಕೆಲಸ. 101 ವಯಸ್ಸಿನ ನನ್ನ ತಾಯಿಯೇ ಬೋರ್ಡ್ ಪರೀಕ್ಷೆ ಬರೆಯಲು ಸ್ಫೂರ್ತಿಯಾಗಿದ್ದಾರೆ'' ಎಂದು ತನ್ನ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಿರುವ ಮಕ್ವಾನ ಹೇಳಿದ್ದಾರೆ.
Next Story