ಸಿನೆಮಾ ನೋಡಿ ಓಡಿ ಹೋದೆ ಎಂದ ಯುವತಿ: ಸೆನ್ಸರ್ ಬೋರ್ಡ್ ಅಧ್ಯಕ್ಷರಿಗೆ ಹೈಕೋರ್ಟು ಬುಲಾವ್

ಚೆನ್ನೈ,ಮಾ. 21: ಗೆಳೆಯನೊಂದಿಗೆ ಓಡಿ ಹೋಗಲು ಸಿನೆಮಾದಿಂದ ಪ್ರೇರಣೆ ಪಡೆದೆ ಎಂದು ಯುವತಿಯೊಬ್ಬಳು ಹೈಕೋರ್ಟಿನಲ್ಲಿ ಹೇಳಿಕೆ ನೀಡಿದ್ದಾಳೆ. ಆದ್ದರಿಂದ ತಮಿಳ್ನಾಡು ಸೆನ್ಸರ್ ಬೋರ್ಡ್ ಅಧ್ಯಕ್ಷ ಹಾಜರಾಗಬೇಕೆಂದು ಹೈಕೋರ್ಟು ಆದೇಶ ಹೊರಡಿಸಿದೆ. ಮಾತ್ರವಲ್ಲ, ಸೆನ್ಸರ್ ಸರಿಯಾಗಿ ಮಾಡದಿರುವುದು ಅಶ್ಲೀಲತೆ ಕಾರಣವಾಗುತ್ತಿದೆ. ಆದ್ದರಿಂದ ಇಂತಹ ಸಿನೆಮಾಗಳು ಯುವ ಸಮುದಾಯವನ್ನು ದಾರಿತಪ್ಪಿಸುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ತಮಿಳ್ನಾಡು ಸೆನ್ಸರ್ ಬೋರ್ಡ್ ಅಧಕ್ಷರು ಮಾರ್ಚ್ 27ರೊಳಗೆ ಹೈಕೋರ್ಟಿನಲ್ಲಿ ಹಾಜರಿರಬೇಕು. ಪೊಕ್ಸೊ ಕಾನೂನಿನಡಿಯಲ್ಲಿ ಬರುವ ಅಪರಾಧ ಕೃತ್ಯಗಳು ಸಿನೆಮಾದಲ್ಲಿ ಇರುವುದಕ್ಕೆ ಸೆನ್ಸರ್ ಬೋರ್ಡ್ ನೇರ ಹೊಣೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾನೂನು ಇದ್ದರೂ ಯಾಕೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ನ್ಯಾಯಮೂರ್ತಿ ನಾಗಮುತ್ತು, ನ್ಯಾಯಾಮೂರ್ತಿ ಅನಿತಾಸುಮಂತ್‌ರ ಹೈಕೋರ್ಟು ಪೀಠ ಈ ಗಮನಾರ್ಹ ಆದೇಶವನ್ನು ಹೊರಡಿಸಿದೆ. 22ವರ್ಷ ವಯಸ್ಸಿನ ಗಂಡು ಹುಡುಗನೊಂದಿಗೆ ದ್ವಿತೀಯ ವರ್ಷದ ಪಿಯುಸಿ ಹುಡುಗಿಯನ್ನು ಹೇಬಿಯಸ್ ಕಾರ್ಪಸ್ ಅನ್ವಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ಯಾಕೆ ಹೀಗೆ ಮಾಡಿದೆ ಎಂದು ಅವಳನ್ನು ಪ್ರಶ್ನಿಸಿದಾಗ ಸಿನೆಮಾ ನೋಡಿ ಪ್ರೇರಣೆಗೊಂಡೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.
2016 ಮೇ. 16ಕ್ಕೆ ಹುಡುಗಿನಾಪತ್ತೆಯಾಗಿದ್ದಳು. ತನಿಖೆಯಲ್ಲಿ ಹುಡುಗಿ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾದ ಯುವಕನೊಂದಿಗೆ ಓಡಿ ಹೋಗಿದ್ದು, ಆಕೆ ಕ್ಯಾಲಿಕಟ್ ನಲ್ಲಿ ಆತನನೊಂದಿಗೆ ಜೀವಿಸುತ್ತಿದ್ದಾಳೆಂದು ತಿಳಿದು ಬಂದಿತ್ತು. ಪೊಲೀಸರಿಗೆ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.ಕೊನೆಗೆ ಹುಡುಗಿಯ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ನ್ಯಾಯಾಲಯಕ್ಕೆ ಹುಡುಗಿಯನ್ನು ಹಾಜರುಪಡಿಸಲಾಗಿದ್ದು, ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ. ನಂತರ ನ್ಯಾಯಾಲಯ ಪ್ರಶ್ನಿಸಿದಾಗ ತಾನು ತಮಿಳು ಸಿನೆಮಾದ ಪ್ರೇರಣೆಯಿಂದ ಹೀಗೆ ಮಾಡಿದೆ ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾಳೆ. ಹುಡುಗಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟು ಸಿನೆಮಾ ಯುವಸಮುದಾಯವನ್ನು ದಾರಿತಪ್ಪಿಸುತ್ತಿದೆ ಎಂದು ವಿಮರ್ಶಿಸಿದೆ.







