ಕಲ್ಲಡ್ಕ : ಕೆ.ಪಿ ಟ್ರಸ್ಟ್‌ನಿಂದ ರಕ್ತದಾನ ಶಿಬಿರ

ಕಲ್ಲಡ್ಕ, ಮಾ.21: ಪ್ರತಿಯೊಬ್ಬ ತನ್ನ ದಿನನಿತ್ಯದ ಕೆಲಸ ಕಾರ್ಯದಲ್ಲಿದ್ದುಕೊಂಡೆ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸಲು ಸಾಧ್ಯ ಎಂದು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಹೇಳಿದರು.
ಕೆ.ಪಿ. ಟ್ರಸ್ಟ್(ರಿ) ವತಿಯಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಕಲ್ಲಡ್ಕ ಹಿ.ಪ್ರಾ.ಶಾಲೆಯಲ್ಲಿ ನಡೆದ ರಕ್ತದಾನ ಹಾಗೂ ರೇಶನ್ ಕಾರ್ಡ್ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಅರ್ಜಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಕಾರ್ಯಕ್ರಮ ಉದ್ಘಾಟಿಸಿದರು. ಗೋಳ್ತಮಜಲು ಗ್ರಾಪಂ ಸದಸ್ಯ ಯೂಸುಫ್ ಹೈದರ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ತಾಪಂ ಸದಸ್ಯೆ ಐಡಾ ಸುರೇಶ್, ಎಂ ಫ್ರೆಂಡ್ಸ್ ಮಂಗಳೂರು ಹಾಗೂ ಗೋಳ್ತಮಜಲು ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಹನೀಫ್ ಗೋಳ್ತಮಜಲು, ಕೆ.ಪಿ. ಟ್ರಸ್ಟ್ (ರಿ) ಸ್ಥಾಪಕಾಧ್ಯಕ್ಷ ಕೆ.ಪಿ. ಅಬ್ದುಲ್ಲಾ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯೆ ಎಲಿಝಬೆತ್, ಬ್ಲಡ್ ಬ್ಯಾಂಕ್ ಮುಖ್ಯಸ್ಥ ಆಂಟನಿ, ನವಾಝ್, ಯೂತ್ ಕಾಂಗ್ರೆಸ್ ನಾಯಕರಾದ ಶಾಫಿ ಇಸ್ಮಾಯೀಲ್ ನಗರ ಉಪಸ್ಥಿತರಿದ್ದರು.
ಎನ್‌ಎಸ್‌ಯುಐ ನಾಯಕ ಕೆ.ಎಸ್ ಅಝ್ವೀರ್ ಶಿಬಿರಕ್ಕೆ ಚಾಲನೆ ನೀಡಿದರು. ಸಿದ್ಧೀಕ್ ಎರ್ಮೆಮಜಲು ಕಿರಾಅತ್ ಪಠಿಸಿದರು. ಶರೀಫ್ ಇಸ್ಮಾಯಿಲ್ ನಗರ ಸ್ವಾಗತಿಸಿದರು. ಸಿದ್ಧಿಕ್ ಇಸ್ಮಾಯೀಲ್ ನಗರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







