ಮದ್ರಸ ಅಧ್ಯಾಪಕನ ಹತ್ಯೆ: ಎಸ್ಸೆಸ್ಸೆಫ್ ಖಂಡನೆ
ಉಳ್ಳಾಲ ,ಮಾ.21 ಕಾಸರಗೋಡು ಚೂರಿ ಎಂಬಲ್ಲಿ ಮಸೀದಿಗೆ ನುಗ್ಗಿ ಕೊಡಗು ಕೊಟ್ಟಮುಡಿ ಆಝಾದ್ ನಗರ ನಿವಾಸಿಯಾದ ರಿಯಾಝ್ ಮುಸ್ಲಿಯಾರ್ ರವರನ್ನು ಭೀಕರವಾಗಿ ಕೊಲೆಗೈದ ಪೈಶಾಚಿಕ ಘಟನೆಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್, ಎಸ್ ವೈ ಎಸ್ ಉಳ್ಳಾಲ ಸೆಂಟರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ತೀವ್ರವಾಗಿ ಖಂಡಿಸಿದೆ.
ಈ ಭೀಕರ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ತಕ್ಷಣವೇ ಬಂಧಿಸಿ, ಸಮಗ್ರ ತ್ವರಿತ ಉನ್ನತ ತನಿಖೆ ನಡೆಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದೆ. ದಿನೇದಿನೇ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯವು ಅಧಿಕಗೊಳ್ಳುತ್ತಿದ್ದು ಅಲ್ಪ ಸಂಖ್ಯಾತ ಸಮುದಾಯ, ಅವರ ಆರಾಧನಾಲಯಗಳು ಹಾಗು ಬೋಧನಾಲಯಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಗಳ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿ ತೌಸೀಫ್ ಸಅದಿ ಹರೇಕಳ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಉಪಸ್ಥಿತರಿದ್ದರು.







