ಬ್ಯಾಂಕ್ ಅಧಿಕಾರಿಗೆ ಹಲ್ಲೆ: ಕ್ರಮಕ್ಕೆ ಆಗ್ರಹ

ಪಡುಬಿದ್ರಿ,ಮಾ.21: ಕಾಟಿಪಳ್ಳದ ಬ್ಯಾಂಕ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪಡುಬಿದ್ರಿ ಪರಿಸರದ ಬ್ಯಾಂಕ್ ಅಧಿಕಾರಿಗಳು ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಡುಬಿದ್ರಿಯ ಎಸ್‌ಬಿಎಮ್ ಬ್ಯಾಂಕ್‌ನಲ್ಲಿ ಮಂಗಳವಾರ ಖಂಡನಾ ಸಭೆ ನಡೆಯಿತು.
ಆಧಾರ್ ನೀಡುವಂತೆ ಕೇಳಿದಕ್ಕೆ ಸುರತ್ಕಲ್‌ನ ಕಾಟಿಪಳ್ಳದ ಸಿಂಡಿಕೇಟ್ ಬ್ಯಾಂಕ್‌ನ ಅಧಿಕಾರಿ ಕುಂಞಣ್ಣ ನಾಕ್ ಅವರ ಮೇಲೆ ಅಮರ್ ಸೋನ್ಸ್ ಕೆ.ಜೆ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಕೆಲಸ ನಿರ್ವಹಿಸಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಲೀಡ್ ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲು ಸಭೆಯಲ್ಲಿ ತೀರ್ಮಾಣಿಸಲಾಯಿತು.
ಸಭೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುರಳೀಧರ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಶ್ರೀಕಾಂತ್ ಹೊಳ್ಳ, ಪಡುಬಿದ್ರಿ ಸಿಂಡಿಕೇಟ್ ಬ್ಯಾಂಕ್‌ನ ಗಜೇಂದ್ರ, ಅಭ್ಯುದಯ ಬ್ಯಾಂಕ್‌ನ ಪ್ರಸನ್ನ ಬೊಂಟ್ರ, ಪಡುಬಿದ್ರಿ ವಿಜಯ ಬ್ಯಾಂಕ್‌ನ ಇಂದ್ರಕೇಶ್ ಮೌರ್ಯ, ಐಓಬಿ ಬ್ಯಾಂಕ್‌ನ ಸಿಮಂತಿನಿ, ಎರ್ಮಾಳು ಕೆನರಾ ಬ್ಯಾಂಕ್‌ನ ಅನಿಲ್‌ಕುಮಾರ್, ಪಡುಬಿದ್ರಿ ಆಕ್ಸಿಸ್ ಬ್ಯಾಂಕ್‌ನ ರಮನಾಥ್, ಉಚ್ಚಿಲ ವಿಜಯಾ ಬ್ಯಾಂಕ್‌ನ ಸುಧೀಂದ್ರ ಪೈ, ಸಿಂಡಿಕೇಟ್ ನಂದಿಕೂರಿನ ಸೌಮ್ಯ ಸುವರ್ಣ ಮತ್ತಿತರರು ಇದ್ದರು.







