ಭಾರತೀಯ ಅರಣ್ಯ ಸೇವೆ ಪರೀಕ್ಷಾ ಫಲಿತಾಂಶ ಪ್ರಕಟ

ಹೊಸದಿಲ್ಲಿ,ಮಾ.21: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ವು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಮುಖ್ಯ ಪರೀಕ್ಷೆ 2016,ನವಂಬರ್‌ನಲ್ಲಿ ಮತ್ತು ವೌಖಿಕ ಪರೀಕ್ಷೆ 2017,ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆದಿತ್ತು.
ಒಟ್ಟು 110 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದು, ಈ ಪೈಕಿ 48 ಜನರು ಸಾಮಾನ್ಯ ವರ್ಗ, 37 ಜನರು ಒಬಿಸಿ, 17 ಜನರು ಪರಿಶಿಷ್ಟ ಜಾತಿಗಳು ಮತ್ತು ಎಂಟು ಜನರು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಯುಪಿಎಸ್‌ಸಿಯ ಜಾಲತಾಣದಲ್ಲಿಯೂ ಫಲಿತಾಂಶ ಲಭ್ಯವಿದೆ.
ಫಲಿತಾಂಶ ಪ್ರಕಟಗೊಂಡ 15 ದಿನಗಳಲ್ಲಿ ಅಭ್ಯರ್ಥಿಗಳ ಅಂಕಗಳು ಯುಪಿಎಸ್‌ಸಿಯ ಜಾಲತಾಣಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎಂದೂ ಹೇಳಿಕೆಯು ತಿಳಿಸಿದೆ.
Next Story