ಕಡೂರು: ಕಳ್ಳತನ ಆರೋಪಿ ಬಂಧನ

ಕಡೂರು, ಮಾ.21: ಪಟ್ಟಣದ ವಿವಿಧ ಭಾಗಗಳಲ್ಲಿ ಬೀರೂರು ಮತ್ತು ತರೀಕೆರೆಯಲ್ಲಿ ಕಳ್ಳತನ ಮಾಡುತ್ತಿದ್ದ ಕಡೂರು ಪಟ್ಟಣದ ಆರೋಪಿಯೋರ್ವನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೂರ್ತಿಹಾಳ್ ಎಂಬಲ್ಲಿನ ಅಪ್ರೋಜ್(ಅಪ್ಪು) ಪೇಂಟರ್ ಎಂದು ಗುರತುಸಿಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಅತ್ಯಂತ ಕಂಠಕವಾಗಿದ್ದ ಕಳ್ಳತನದ ಆರೋಪಿಯನ್ನು ಬಂಧಿಸಿರುವ ಕಡೂರು ಪೊಲೀಸರ ಕ್ರಮವನ್ನು ತರೀಕೆರೆ ವಿಭಾಗದ ಪೊಲೀಸ್ ಉಪಾದೀಕ್ಷಕ ರಾಜನ್ ವೈ.ನಾಯಕ್ ಶ್ಲಾಘಿಸಿದ್ದಾರೆ.
ಕಡೂರು ಪಟ್ಟಣದ ಕೆ.ಟಿ.ಮುದಿಯಪ್ಪ ಬಡಾವಣೆಯ ಕೆ.ಎಂ.ರವಿಯವರ ವಠಾರದಲ್ಲಿರುವ ಬೇಕರಿ(ಆನಂದ್)ಯಲ್ಲಿ, ಛತ್ರದ ಬೀದಿಯ ಬಾಬುಲಾಲ್ ಮನೆಯಲ್ಲಿ, ಕಾಳಿದಾ ನಗರದ ಆರಾದ್ಯರ ಮನೆಯಲ್ಲಿ, ಕೆ.ಎಂ.ರಸ್ತೆಯ ಮಂಜುಳ ರವರ ಮನೆಯಲ್ಲಿ, ಲೋಕೋಪಯೋಗಿ ವಸತಿ ಗೃಹದ ಮಂಜುಳಮ್ಮನವರ ಮನೆಯಲ್ಲಿ ಕೆಟೆಯ ಬಾಷಾರವರ ಮನೆಯಲ್ಲಿ, ಬೀರೂರಿನ ರಾಜಾಜಿನಗರ, ರೈಲ್ವೆ ವಸತಿ ಗೃಹ, ತರೀಕೆರೆಯಲ್ಲಿ ಮೂರು ಕಡೆ ಮಾಡಿದ ಕಳ್ಳತನ ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆ ಮಾಡಲಾಗಿದೆ.
ಆರೋಪಿಯಿಂ ದ 1.10 ಲಕ್ಷ ನಗದು, 205 ಗ್ರಾಂ. ಚಿನ್ನದ ಆಭರಣಗಳು, 530 ಗ್ರಾಂ ಬೆಳ್ಳಿಯ ಆಭರಣಗಳು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯದ ಸುಮಾರು 7.54 ಲಕ್ಷ ರೂ.ಗಳು ಎಂದು ಅಂದಾಜಿಸಸಲಾಗಿದೆ
ಕಡೂರು ವೃತ್ತ ನಿರೀಕ್ಷಕ ಸತ್ಯನಾರಾಯಣ,ಪಿಎಸ್‌ಐ ರಾಕೇಶ್, ಸಿಬ್ಬಂದಿ ಕೃಷ್ಣಮೂರ್ತಿ, ಮಧುಕುಮಾರ್, ಮಲ್ಲಪ್ಪ, ಚಿದಾನಂದ, ರಾಜಪ್ಪ, ಚಂದ್ರು, ನಜೀರ್, ಆಂಜೇಯ ಮತ್ತು ನವೀನ್‌ಕುಮಾರ್ ಮತ್ತಿತರರಿದ್ದರು.





