ನನ್ನ ಸರಕಾರ ಸರ್ವರಿಗಾಗಿ ಕೆಲಸ ಮಾಡಲಿದೆ: ಆದಿತ್ಯನಾಥ

ಹೊಸದಿಲ್ಲಿ,ಮಾ.21: ಎರಡು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿರುವ ಆದಿತ್ಯನಾಥ ಅವರು ತಾನಿನ್ನೂ ಸದಸ್ಯನಾಗಿರುವ ಲೋಕಸಭೆಯಲ್ಲಿ ಮಂಗಳವಾರ ಹಾಜರಾಗಿದ್ದರು. ತನ್ನ ಸರಕಾರವು ಸಮಾಜದ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸಲಿದೆ ಎಂದು ಅವರು ಈ ವೇಳೆ ಹೇಳಿದರು.
ಸದನದಲ್ಲಿ ಹಣಕಾಸು ಮಸೂದೆಯ ಮೇಲೆ ಚರ್ಚೆ ನಡೆಯುತ್ತಿದ್ದಾಗ ಸಂಜೆ 4:30ರ ಸುಮಾರಿಗೆ ಆಗಮಿಸಿದ ಅವರನ್ನು ಸದಸ್ಯರು ಮೇಜುಗಳನ್ನು ಬಡಿದು ಸ್ವಾಗತಿಸಿದರು.
ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಹಲವಾರು ಸದಸ್ಯರು ಆದಿತ್ಯನಾಥರನ್ನು ಅಭಿನಂದಿಸಿದರು.
ನಾಯ್ಡು ಅವರ ಬಳಿಕ ಹಣಕಾಸು ಮಸೂದೆಯ ಮೇಲೆ ಮಾತನಾಡಿದ ಆದಿತ್ಯನಾಥ ಅವರು,ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ತನ್ನ ನೇಮಕ ಕುರಿತ ಆತಂಕಗಳನ್ನು ದೂರಮಾಡಲು ಒತ್ತು ನೀಡಿದರು.
Next Story