ಚಂದಹಿತ್ತುಲು - ಕಟ್ಟಪುಣಿ ರಸ್ತೆ ಉದ್ಘಾಟನೆ

ಕೊಣಾಜೆ,ಮಾ.21: ನರಿಂಗಾನ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡಿನ ಸಿ.ಎಚ್.ರಹ್ಮಾನ್ ಅವರ ಅನುದಾನದಿಂದ ಚಂದಹಿತ್ತುಲುನಿಂದ ಕಟ್ಟೆಪುಣಿತನಕ ನಿರ್ಮಾಣಗೊಂಡ ನೂತನ ರಸ್ತೆಯನ್ನು ಆಹಾರ ಸಚಿವರಾದ ಯು.ಟಿ.ಖಾದರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ನರಿಂಗಾನ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಪಂಚಾಯಿತಿ ಸದಸ್ಯ ಸಿ.ಎಚ್.ರಹ್ಮಾನ್, ಪಯಾರ್ ಮೊಂಟೆಪದವು, ಲತೀಫ್ ಕಾಪಿಕಾಡ್, ಸೆಫಿಯಾ ವಿದ್ಯಾನಗರ, ಪದ್ಮನಾಭ ನರಿಂಗಾನ, ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ಖಾದರ್ ಕಟ್ಟೆಪುಣಿ, ಹನೀಫ್ ಚಂದಹಿತ್ತುಲು, ಶಾಕಿರ್, ಚಂದ್ರ ಗಟ್ಟತಡಿ, ಖಲೀಲ್, ಲತೀಫ್, ಅಹ್ಮದ್ ಕುಂಞಿ, ಹಮೀದ್ ಹಾಜಿ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
Next Story





