ಮದ್ರಸ ಶಿಕ್ಷಕನ ಹತ್ಯೆ ಪ್ರಕರಣ: ತನಿಖೆ ತೀವ್ರ

ಕಾಸರಗೋಡು, ಮಾ.22: ನಗರ ಹೊರವಲಯದ ಬಟ್ಟಂಪಾರೆ ಹಳೆ ಚೂರಿ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದ ಮದ್ರಸ ಶಿಕ್ಷಕ ರಿಯಾಝ್ ವೌಲವಿಯವರ ಹತ್ಯೆ ಪ್ರಕರಣದ ತನಿಖೆಯನ್ನು ತನಿಖಾ ತಂಡ ತೀವ್ರಗೊಳಿಸಿದೆ.
ಕಣ್ಣೂರು ಅಪರಾಧ ಪತ್ತೆದಳದ ಐಜಿಪಿ ಶ್ರೀನಿವಾಸ್ ನೇತೃತ್ವದ ತನಿಖಾ ತಂಡವು ಇಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿದೆ. ಹತ್ಯೆ ನಡೆದ ಕೋಣೆ, ಪರಿಸರವನ್ನು ತನಿಖಾ ಪರಿಶೀಲನೆ ನಡೆಸಿದೆ. ರಿಯಾಝ್ ಅವರಿದ್ದ ಕೋಣೆ ಪರಿಸರದ ಮನೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ವೀಡಿಯೋ ದೃಶ್ಯಾವಳಿಗಳನ್ನೂ ತಂಡ ಪರಿಶೀಲಿಸಿದೆ.
ಮಡಿಕೇರಿಯ ಹೊದವಾಡ ಗ್ರಾಮದ ಆಝಾದ್ ನಗರದ ನಿವಾಸಿ ಸುಲೈಮಾನ್ ಎಂಬವರ ಪುತ್ರ ರಿಯಾಝ್ ವೌಲವಿಯವರನ್ನು ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕತ್ತು ಕೊಯ್ದು ಹತ್ಯೆಗೈಯ್ದಿದ್ದಾರೆ.
Next Story





