ಸಂಸದರಿಗೆ ಪಿಂಚಣಿ, ಇತರ ಸೌಲಭ್ಯ ವಿರೋಧಿಸಿ ಅರ್ಜಿ: ಕೇಂದ್ರ,ಚು.ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಹೊಸದಿಲ್ಲಿ,ಮಾ.22: ಸಂಸದರಿಗೆ ನೀಡಲಾಗುತ್ತಿರುವ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿದೆ.
ಎನ್‌ಜಿಒ ಲೋಕ್ ಪ್ರಹರಿ ಸಲ್ಲಿಸಿರುವ ಅರ್ಜಿ ಕುರಿತಂತೆ ನ್ಯಾ.ಜೆ. ಚೆಲಮೇಶ್ವರ ನೇತೃತ್ವದ ಪೀಠವು ಲೋಕಸಭೆ ಮತ್ತು ರಾಜ್ಯಸಭಾ ಮಹಾ ಕಾರ್ಯದರ್ಶಿಗಳಿಗೂ ನೋಟಿಸುಗಳನ್ನು ಹೊರಡಿಸಿತು.
ಸಂಸದರು ಮಾಜಿಗಳಾದ ಬಳಿಕ ಅವರಿಗೆ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ನೀಡುವುದು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು)ಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಯಾವುದೇ ಕಾನೂನು ರೂಪಿಸದೆ ಸಂಸದರಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸಲು ಸಂಸತ್ತಿಗೆ ಅಧಿಕಾರವಿಲ್ಲ ಎಂದೂ ಅರ್ಜಿಯು ವಾದಿಸಿದೆ.
Next Story





