ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಅಮಿತಾಭ್

ಹೊಸದಿಲ್ಲಿ, ಮಾ.22: ಆಸ್ಟ್ರೇಲಿಯಾದ ಮಾಧ್ಯಮವೊಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕ್ರೀಡಾ ಲೋಕದ 'ಡೊನಾಲ್ಡ್ ಟ್ರಂಪ್' ಎಂದು ವ್ಯಂಗ್ಯವಾಡಿದ್ದನ್ನು ಬಿಗ್ ಬಿ ಅಮಿತಾಭ್ ಬಚ್ಚನ್ ಖಂಡಿಸಿ ವಿರಾಟ್ ಬೆಂಬಲಕ್ಕೆ ನಿಂತಿದ್ದಾರೆ.
ಟ್ವಿಟ್ಟರಿನಲ್ಲಿ ಈ ಬಗ್ಗೆ ಅಮಿತಾಭ್ ಹೀಗೆಂದು ಬರೆದಿದ್ದಾರೆ. ‘‘ಆಸ್ಟ್ರೇಲಿಯಾದ ಮಾಧ್ಯಮ ವಿರಾಟ್ ನನ್ನು ಕ್ರೀಡೆಯ ಡೊನಾಲ್ಡ್ ಟ್ರಂಪ್ ಎಂದು ಹೇಳಿದೆ!! ಅವರೊಬ್ಬ ವಿಜೇತ ಹಾಗೂ ಅಧ್ಯಕ್ಷನೆಂದು ಒಪ್ಪಿಕೊಂಡಿದ್ದಕ್ಕೆ ಆಸ್ಟ್ರೇಲಿಯಾ ಮಾಧ್ಯಮಕ್ಕೆ ಧನ್ಯವಾದಗಳು.’’
ಭಾರತ ಮತ್ತು ಆಸ್ಟ್ರೇಲಿಯಾ ನಡುವಣೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಸಂದರ್ಭ ನಡೆದ ಹಲವಾರು ಘಟನೆಗಳ ಹಿನ್ನೆಲೆಯಲ್ಲಿ ಮೇಲಿನ ಬೆಳವಣಿಗೆ ನಡೆದಿದ್ದ ಸ್ಟೇಡಿಯಂನಲ್ಲಿ ನಡೆದ ವಾಗ್ವಾದಗಳು ಹಾಗೂ ಅಂಗಳದ ಹೊರಗೆ ನಡೆದ ದೋಷಾರೋಪಣೆಗಳು ಹಲವು ಇವೆ.
ಆಸ್ಟ್ರೇಲಿಯಾದ 'ಡೈಲಿ ಟೆಲಿಗ್ರಾಫ್' ವಿರಾಟ್ ಅವರನ್ನು ಡೊನಾಲ್ಡ್ ಟ್ರಂಪ್ ಗೆ ಹೋಲಿಸಿದರೆ ನಂತರ ಬಿಸಿಸಿಐ ಹಾಗೂ ಐಸಿಸಿ ಕೂಡ ಆಸ್ಟ್ರೇಲಿಯಾ ಮಾಧ್ಯಮದಿಂದ ಟೀಕೆಗೊಳಗಾಗಿವೆ. ತರುವಾಯ ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಭಾರತೀಯ ತಂಡಕ್ಕೆ ಆಟದ ಮೇಲೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದ್ದಾರೆ.







