ರಾಹುಲ್ ಗಾಂಧಿಯನ್ನು ಟೀಕಿಸಿದ ಯುವಕಾಂಗ್ರೆಸ್‌ನ ಉಪಾಧ್ಯಕ್ಷ ರಾಜೀನಾಮೆ
ತಿರುವನಂತಪುರಂ, ಮಾ. 2: ಕೇರಳ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಆರ್. ಮಹೇಶ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಬೇರೆ ಪಕ್ಷಕ್ಕೆ ಸೇರುವುದಿಲ್ಲ, ರಾಜಕೀಯವನ್ನೆ ಬಿಟ್ಟು ಬೇರೆ ಕೆಲಸ ಮಾಡಿ ಬದುಕುತ್ತೇನೆಂದು ಮಹೇಶ್ ಹೇಳಿದ್ದಾರೆ. ನಿನ್ನೆ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಕಟುವಾಗಿ ಟೀಕಿಸಿದ್ದರು.
ತಾನು ಕೊಳೆತು ಹೋಗಲು ಇಷ್ಟಪಡುವುದಿಲ್ಲ ಎಂದು ಮೇಹೇಶ್ ಹೇಳಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಸೋಲಿಗೆ ಪಕ್ಷದ ಸದಸ್ಯರೇ ತನ್ನನ್ನು ಅಪಹಾಸ್ಯಮಾಡಿದ್ದಾರೆ. ಮಹೇಶ್ ಕೊಲ್ಲಂನಲ್ಲಿ ಕಾಂಗ್ರೆಸ್ಸಿನ ಪ್ರಮುಖ ಯುವ ನಾಯಕ ಆಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಪ್ರಮಾಣದ ಮತಗಳಿಂದ ಅವರು ಕರುನಾಗಪಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ರಾಹುಲ್ ಗಾಂಧಿಗೆ ನಾಯಕತ್ವ ವಹಿಸಿಕೆಲಸ ಮಾಡುವ ಮನಸ್ಸಿಲ್ಲ ಎಂದು ನಿನ್ನೆ ಅವರುಫೇಸ್ ಬುಕ್‌ನಲ್ಲಿ ಬರಹ ಹಾಕಿದ್ದರು. ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ. ಆ್ಯಂಟನಿಯನ್ನೂ ಮಹೇಶ್ ಟೀಕಿಸಿದ್ದರು. ಆ್ಯಂಟನಿ ದಿಲ್ಲಿಯಲ್ಲಿ ಮೌನಿ ಬಾಬಾನಂತೆ ಕೂತಿದ್ದಾರೆಂದು ಅವರು ಹೇಳಿದ್ದರು.