ಎಸ್ಸೆಸ್ಸೆಫ್ ಕಾನ್ಫಿಡೆನ್ಸ್ ಟೆಸ್ಟ್ : ಸುಳ್ಯ ಹಾಗೂ ಸುರತ್ಕಲ್ ಡಿವಿಷನ್ ಪ್ರಥಮ
ಬಂಟ್ವಾಳ,ಮಾ.22 : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ನಡೆಸಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ನಡೆಸಿದ ಕಾನ್ಫಿಡೆನ್ಸ್ ಟೆಸ್ಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಸುಮಾರು 4 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದು, 3600 ವಿದ್ಯಾರ್ಥಿಗಳು ತೇರ್ಗಡೆಗೊಂಡು 90 ಶೇಕಡಾ ಫಲಿತಾಂಶವನ್ನು ದ.ಕ ಜಿಲ್ಲೆ ಪಡೆದಿರುತ್ತದೆ. ಗಣಿತ ವಿಷಯದಲ್ಲಿ ನಡೆದ ಪರೀಕ್ಷೆಯಲ್ಲಿ ಸುಳ್ಯ ಡಿವಿಷನ್ 96 ಶೇಕಡಾ ಫಲಿತಾಂಶವನ್ನು ಪಡೆದು ಪ್ರಥಮ ಸ್ಥಾನವನ್ನು, ಸುರತ್ಕಲ್ ಡಿವಿಷನ್ 95 ಶೇಕಡಾ ಫಲಿತಾಂಶವನ್ನು ಪಡೆದು ದ್ವಿತೀಯ ಸ್ಥಾನವನ್ನು ಹಾಗೂ ವಿಜ್ಞಾನ ವಿಷಯದಲ್ಲಿ ಸುರತ್ಕಲ್ ಡಿವಿಷನ್ 100 ಶೇಕಡಾ ಫಲಿತಾಂಶವನ್ನು ಪಡೆದು ಪ್ರಥಮ ಸ್ಥಾನವನ್ನು, ಸುಳ್ಯ ಡಿವಿಷನ್ 98 ಶೇಕಡಾ ಫಲಿತಾಂಶವನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ.
ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು, ವಿಟ್ಲ ಡಿವಿಷನ್‌ನ ಶರಣ್ಯ ಎಂ 150 ಅಂಕಗಳು ಹಾಗೂ ದ್ವಿತೀಯ ಸ್ಥಾನವನ್ನು ಪುತ್ತೂರು ಡಿವಿಷನ್‌ನ ನಿಶಾಂತ್ ಟಿ.ಆರ್ 148 ಅಂಕಗಳನ್ನು ಗಳಿಸಿರುತ್ತಾರೆ





