ಮದ್ರಸ ಅಧ್ಯಾಪಕರ ಕೊಲೆಗೆ ಖಂಡನೆ
ಮಂಗಳೂರು, ಮಾ.22: ಮುಸ್ಲಿಮರ ಶ್ರದ್ಧಾ ಕೇಂದ್ರವಾದ ಮಸೀದಿಗೆ ನುಗ್ಗಿ ಮದ್ರಸ ಶಿಕ್ಷಕ ಕೊಟ್ಟಮುಡಿ ಅಝಾದ್ ನಗರ ನಿವಾಸಿ ರಿಯಾಝ್ ಮುಸ್ಲಿಯಾರ್‌ರನ್ನು ಬರ್ಬರವಾಗಿ ಕೊಂದ ಕೃತ್ಯವನ್ನು ಕರ್ನಾಟಕ ಹನೀಫೀಸ್ ಅಸೋಸಿಯೇಶನ್ ಖಂಡಿಸಿದೆ.
ಇಂತಹ ಕ್ರತ್ಯಕ್ಕೆ ಪ್ರಚೋದನೆ ನೀಡುವ ಎಲ್ಲ ದುಷ್ಟ ಶಕ್ತಿಗಳನ್ನು ಮಟ್ಟಹಾಕಿ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಯೂರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಹಾಗೂ ಕೊಲೆ ಪಾತಕರಿಗೆ ಕಠಿಣ ಶಿಕ್ಷೆ ನೀಡಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅಸೋಸಿಯೇಶನ್ ಆಗ್ರಹಿಸಿದೆ.
ಕಾಸರಗೋಡಿನ ಚೂರಿ ಎಂಬಲ್ಲಿ ಮದ್ರಸ ಶಿಕ್ಷಕ ರಿಯಾಝ್ ರ ಕೊಲೆಕೃತ್ಯವನ್ನು ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾಸ್ಟರ್ ಮತ್ತು ಜಂಇಯ್ಯತುಲ್ ಮುಅಲ್ಲಿಮೀನ್ ಸಂಘಟನೆ ಆಗ್ರಹಿಸಿದರು.
Next Story





