ವಿವಾಹಿತ ಯುವಕ ನಾಪತ್ತೆ

ಉದ್ಯಾವರ, ಮಾ.22: ಉದ್ಯಾವರದಲ್ಲಿ ಲೈನ್‌ಸೇಲ್ ವ್ಯಾಪಾರ ಮಾಡಿಕೊಂಡಿದ್ದ ಪ್ರವೀಣ್‌ಕುಮಾರ್ (31) ಎಂಬವರು ಮಾ.17ರಂದು ಕೆಲಸಕ್ಕೆಂದು ಮೂಡನಿಡಂಬೂರು ಬನ್ನಂಜೆಯ ಮನೆಯಿಂದ ಉದ್ಯಾವರಕ್ಕೆ ಹೋದವರು ವಾಪಾಸು ಮನೆಗೆ ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಆತನ ಪತ್ನಿ ಸುಮಲತಾ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನನ್ನ ಮೊಪೆಡ್ ಬೈಕ್‌ನಲ್ಲಿ ಅವರು ಕೆಲಸಕ್ಕೆ ತೆರಳಿದ್ದು, ಅನಂತರ ಮನೆಗೆ ಹಿಂದಿರುಗಿಲ್ಲ. ಮಾ.18ರ ರಾತ್ರಿ 10:30ರಸುಮಾರಿಗೆ ದೂರವಾಣಿ ಕರೆ ಮಾಡಿದ ಪ್ರವೀಣ್, ತಾನು ಬಾಂಬೆಯಲ್ಲಿರುವುದಾಗಿ ತಿಳಿಸಿ ಕರೆ ಸ್ಥಗಿತಗೊಳಿಸಿ ದ್ದಾಗಿ ಸುಮಲತಾ ದೂರಿನಲ್ಲಿ ತಿಳಿಸಿದ್ದಾರೆ.
Next Story





