ಉಪಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ: ರಜನೀಕಾಂತ್
ಚೆನ್ನೈ,ಮಾ. 23: ಜಯಲಲಿತಾ ನಿಧನದಿಂದ ತೆರವಾದ ತಮಿಳ್ನಾಡಿನ ಆರ್‌ಕೆ ನಗರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಾನುಯಾರನ್ನೂ ಬೆಂಬಲಿಸುವುದಿಲ್ಲ ಎಂದು ರಜನೀಕಾಂತ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಗೀತ ನಿರ್ದೇಶಕ ಗಂಗೈ ಅಮರನ್ ರಜನಿಯನ್ನು ಭೇಟಿಯಾದ ಬೆನ್ನಿಗೆ ರಜನೀಕಾಂತ್‌ರಿಂದ ಸ್ಪಷ್ಟನೆಯ ಟ್ವೀಟ್ ಹೊರಬಿದ್ದಿದೆ. ಗಂಗೈ ಅಮರನ್‌ರಿಗೆ ರಜನೀಕಾಂತ್ ಶುಭಾಶಯ ಕೋರಿದ್ದಾರೆ ಎಂದು ಅಭ್ಯರ್ಥಿಯ ಪುತ್ರ ವೆಂಕಟ್ ಪ್ರಭು ಟ್ವೀಟ್ ಮಾಡಿ ತಿಳಿಸಿದ್ದರು. ಇದರ ನಂತರ ರಜನಿ ರಾಜಕೀಯಕ್ಕೆ ಬರಲಿದ್ದಾರೆನ್ನುವ ರೀತಿಯ ಸುದ್ದಿಗಳು ಹರಡತೊಡಗಿತ್ತು. ಇವೆಲ್ಲಕ್ಕೂ ರಜನೀಕಾಂತ್ ಪೂರ್ಣ ವಿರಾಮ ಹೇಳಿದ್ದಾರೆ. ತಾನು ಯಾರನ್ನೂ ಬೆಂಬಲಿಸುವುದಿಲ್ಲ ಎನ್ನುವ ಮೂಲಕ ಮತದಾರರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಕೆಆರ್ ನಗರದ ಉಪಚುನಾವಣೆಯಲ್ಲಿ ಎಐಡಿಎಂಕೆಯ ಮಧುಸೂಧನ್, ಟಿಟಿವಿ ದಿನಕರನ್, ಜಯಲಲಿತಾರ ಸೊಸೆ ದೀಪಾ ಜಯಕುಮಾರ್ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
Next Story