ಅಲ್‌ಕೆಮಿಸ್ಟ್ ಸಂಸ್ಥೆಯ ವಂಚನೆ ಪ್ರಕರಣ: ತನಿಖೆಗೆ ವಿಶೇಷ ದಳ ರಚನೆ

ಕೋಲ್ಕತಾ, ಮಾ.23: ರಾಜ್ಯಸಭೆಯ ಸಂಸದ ಕೆ.ಡಿ.ಸಿಂಗ್ ಅವರ ಮಾಲಕತ್ವದ ಅಲ್‌ಕೆಮಿಸ್ಟ್ ಸಮೂಹ ಸಂಸ್ಥೆಯ ಮೂರು ಸಂಸ್ಥೆಗಳ ವಿರುದ್ದ ಇರುವ ವಂಚನೆ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ.
ಅಲ್‌ಕೆಮಿಸ್ಟ್ ಸಮೂಹ ಸಂಸ್ಥೆಯ ಮೂರು ಸಂಸ್ಥೆಗಳು ಹೂಡಿಕೆದಾರರಿಗೆ 2.53 ಕೋಟಿ ರೂ. ವಂಚಿಸಿವೆ ಎನ್ನಲಾದ ಪ್ರಕರಣದ ಹಿನ್ನೆಲೆಯಲ್ಲಿ ಮಾ.16ರಂದು ಸಂಸ್ಥೆಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಹೂಡಿಕೆದಾರರು ನೀಡಿದ ದೂರಿನ ಅನ್ವಯ ಬೋಬಝಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ದಳ ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story





