ಈಜಿಪ್ಟ್: ಬಂಡುಕೋರರೊಂದಿಗೆ ಘರ್ಷಣೆ; 10 ಸೈನಿಕರ ಸಾವು

ಕೈರೋ, ಮಾ. 23: ಈಜಿಪ್ಟ್‌ನ ಮಧ್ಯ ಸಿನೈಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಘರ್ಷಣೆಯಲ್ಲಿ 10 ಸೈನಿಕರು ಮೃತಪಟ್ಟಿದ್ದಾರೆ ಎಂದು ಈಜಿಪ್ಟ್ ಸೇನೆ ತಿಳಿಸಿದೆ.
ಈ ಘರ್ಷಣೆಯಲ್ಲಿ 15 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಹಾಗೂ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.ಆದರೆ, ತನ್ನ ಸೈನಿಕರು ಭಯೋತ್ಪಾದಕರನ್ನು ಬೆನ್ನಟ್ಟುವಾಗ ರಸ್ತೆ ಬದಿಯಲ್ಲಿ ಬಾಂಬ್‌ಗಳು ಸಿಡಿದು ಮೃತಪಟ್ಟಿದ್ದಾರೆ ಎಂದಿದೆ.
ಸಿನೈಯಲ್ಲಿ ಹಲವಾರು ವರ್ಷಗಳಿಂದ ಈಜಿಪ್ಟ್ ಬಂಡಾಯ ಸಮಸ್ಯೆಯನ್ನು ಎದುರಿಸುತ್ತಿದೆ.ದಾಳಿಯ ವೇಳೆ, ಸೈನಿಕರು ಭಾರೀ ಪ್ರಮಾಣದಲ್ಲಿ ಸ್ಫೋಟಕಗಳನ್ನು ನಾಶಪಡಿಸಿದ್ದಾರೆ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
Next Story





