ಯೋಗೇಂದ್ರ ವಸುಪಾಲ್ ಜಾಮೀನು ಅರ್ಜಿ ತಿರಸ್ಕೃತ

ಚೆನ್ನೈ, ಮಾ.23: ಆನ್‌ಲೈನ್ ಹೋಮ್‌ಸ್ಟೇ ವ್ಯವಸ್ಥೆ ಮಾಡಿಕೊಡುವ ಸಂಸ್ಥೆ ಸ್ಟೆಝಿಲ್ಲಾದ ಸಹ ಸಂಸ್ಥಾಪಕ ಯೋಗೇಂದ್ರ ವಸುಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಸಿಬಿ-ಸಿಬಿಸಿಐಡಿ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ವಸುಪಾಲ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಆತನನ್ನು ಒಂದು ದಿನದ ಮಟ್ಟಿಗೆ ಪೊಲೀ್ ಕಸ್ಟಡಿಗೆ ನೀಡುವಂತೆ ಸೂಚಿಸಿತು.
ಸ್ಟೆಝಿಲ್ಲಾ ಸಂಸ್ಥೆ ಫೆ.2016ರಿಂದ ತಾನು ನೀಡಿದ ಸೇವೆಗೆ 1.69 ಕೋಟಿ ರೂ. ಪಾವತಿಸಲು ಬಾಕಿ ಇರಿಸಿಕೊಂಡಿರುವುದಾಗಿ ‘ಜಿಗ್‌ಸಾ ಅಡ್ವರ್ಟೈಸಿಂಗ್ ಆ್ಯಂಡ್ ಸೊಲ್ಯೂಷನ್ಸ್ ’ ಸಂಸ್ಥೆಯ ಸಿ.ಎಸ್.ಆದಿತ್ಯ ಎಂಬವರು ದೂರು ನೀಡಿದ ಹಿನ್ನೆಲೆಯಲ್ಲಿ ವಸುಪಾಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು.
Next Story





