ಬೈಕ್‌ಗೆ ಕಾರು ಢಿಕ್ಕಿ: ಸವಾರನಿಗೆ ಗಾಯ

ಮಂಗಳೂರು, ಮಾ. 23: ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಸಹ ಸವಾರ ಗಾಯಗೊಂಡಿರುವ ಘಟನೆ ಸುರತ್ಕಲ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ರವಿಚಂದ್ರನ್ ಎಂಬವರು ಬೈಕ್‌ನಲ್ಲಿ ಚಂದ್ರಹಾಸ ಎಂಬವರನ್ನು ಹಿಂಬದಿ ಸವಾರನಾಗಿ ಕುಳ್ಳಿಸಿಕೊಂಡು ತಡಂಬೈಲ್‌ನಿಂದ ಸುರತ್ಕಲ್‌ನ ಕಡೆಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಸೂರಜ್ ಹೊಟೇಲ್ ಬಳಿ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಇಬ್ಬರೂ ರಸ್ತೆಗುರುಳಿ ಬಿದ್ದಿದ್ದು, ಚಂದ್ರಹಾಸರಿಗೆ ಎಡಕೈಯ ಭುಜಕ್ಕೆ ಗುದ್ದಿದ ಗಾಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರಿನ ಚಾಲಕ ಶೋಧನ ಎಂಬವರ ನಿರ್ಲಕ್ಷದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಸುರತ್ಕಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





