ಗದಗ: ಡಂಬಳ ಗೋ ಶಾಲೆಯಲ್ಲಿ ಗೋವುಗಳ ಸಾವು
ಪ್ರಕರಣ ಮುಚ್ಚಿಹಾಕಲು ಅಧಿಕಾರಿಗಳ ಯತ್ನ
ಬಾಯಿ ಬಿಡದಿರಲು ತಹಶೀಲ್ದಾರ್‌ರಿಂದ ಒತ್ತಡ
ಗದಗ, ಮಾ.23: ಬಿಸಿಲಿನ ತಾಪಕ್ಕೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗೋ ಶಾಲೆಯಲ್ಲಿ ಕರುಗಳು ಸತ್ತ ಘಟನೆ ನಡೆದಿದೆ.
ಗೋ ಶಾಲೆಯಲ್ಲಿ ಸಮರ್ಪಕವಾಗಿ ನೀರು ಮತ್ತು ಮೇವು ಒದಗಿಸದಿರುವುದು ಕರುಗಳ ಸಾವಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವನ್ನಪ್ಪಿದ ಕರುಗಳ ಮರಣೋತ್ತರ ಪರೀಕ್ಷೆ ಮಾಡಿಸದೇ ಒತ್ತಾಯ ಪೂರ್ವಕವಾಗಿ ಕರುಗಳನ್ನು ಒಯ್ಯುವಂತೆ ಅಧಿಕಾರಿಗಳು ಒತ್ತಡ ಹೆರಿದ್ದರು ಎಂದು ಗೋಶಾಲೆಯಲ್ಲಿದ್ದ ತನ್ನ ಎರಡು ಕರುಗಳನ್ನು ಕಳೆದು ಕೊಂಡಿರುವ ಡಂಬಳ ಗ್ರಾಮದ ಮಲ್ಲಪ್ಪಮಾಳಪ್ಪನವರಮಠ ಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸತ್ತ ಕರುಗಳನ್ನು ಹೊರಗಡೆ ಒಯ್ಯುವಂತೆ ಅಧಿಕಾರಿಗಳು ಗದರಿಸಿದ್ದು, ಕರುಗಳ ಸಾವು ಮುಚ್ಚಿ ಹಾಕಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಮುಂಡರಗಿ ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿಯವರು, ಕರುಗಳು ಸಾವನ್ನಪ್ಪಿರುವ ವಿಷಯ ಬಾಯಿಬಿಡದಂತೆ ಒತ್ತಡ ಹೇರಿದ್ದಾರೆ ಎಂದು ಮಲ್ಲಪ್ಪಮಾಳಪ್ಪನವರಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





