ವಿವಾಹಿತ ಮಹಿಳೆ ನಾಪತ್ತೆ
ಚಿಕ್ಕಮಗಳೂರು, ಮಾ.23: ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾಪತ್ತೆಯಾದ ಮಹಿಳೆ ನಗರದ ರಾಂಪುರ ಎಂಬಲ್ಲಿನ ದೇವಸ್ಥಾನದ ಹತ್ತಿರದ ವಾಸಿ ಚೈತ್ರಾ (29) ಎಂದು ಗುರುತಿಸಲಾಗಿದೆ.
ಚೈತ್ರಾ ಆದಿಶಕ್ತಿನಗರದ ಪಾಜಿಲ್ ಶಾಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಗಂಡ ಅಜೆಯ್ ಅಸ್ಸಾಂಗೆ ಹೋದವರು ಸುಮಾರು 5 ತಿಂಗಳಿನಿಂದ ಮರಳಿ ಬಂದಿಲ್ಲ. ಚೈತ್ರಾ ಮಾ.14ರಂದು ಮಂಗಳವಾರ ಬೆಳಗ್ಗೆ 9 ಗಂಟೆಗೆ ಶಾಮಿಲ್‌ಗೆ ಕೆಲಸಅ್ಕೆ ಹೋದವರು ಮನೆಗೆ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಹರೆ ಈ ರೀತಿ ಇದೆ: ಗೋಧಿ ಮೈ ಬಣ್ಣ, 5.5 ಅಡಿ ಎತ್ತರ, ತೆಳ್ಳನೆಯ ಮೈ ಕಟ್ಟು, ದುಂಡು ಮುಖ, ಕಪ್ಪು ತಲೆಗೂದಲು, ಕನ್ನಡ ಭಾಷೆ ಮಾತನಾಡುವವರಾಗಿದ್ದು, ಕೆಂಪು ಬಣ್ಣದ ನೈಟಿ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಚಿಕ್ಕಮಗಳೂರು ಮಹಿಳಾ ಪೊಲೀಸ್‌ಠಾಣೆ ಅಥವಾ ದೂ.ಸಂ:08262-222836, 9449743983ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.





