ಮಾ.27: ಸ್ನೇಹ ಸಮ್ಮಿಲನ
ಮಂಗಳೂರು, ಮಾ.23: ಜಾಮಿಅ ದಾರುಸ್ಸಲಾಂ ಅಲ್ ಇಸ್ಲಾಮಿಯ್ಯ ನಂದಿ ಇದರ ಮಾನ್ಯತೆ ಪಡೆದಿರುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತ್ವೈಬ ಕಿನ್ಯದ ಪಂಚವಾರ್ಷಿಕದ ಪ್ರಯುಕ್ತ ಮಾ.27ರಂದು ‘ತ್ವೈಬ ವಸಂತಂ’ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಸಂಸ್ಥೆಯ ಪ್ರ.ಕಾರ್ಯದರ್ಶಿ ಸಿರಾಜುದ್ದೀನ್ ಹಾಜಿ ಅಲಂಕಾರು ಮಾತನಾಡಿ, ಅಂದು ಅಪರಾಹ್ನ 3ಗಂಟೆಗೆ ವಾದಿತ್ವೈಬ ಕ್ಯಾಂಪಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಂಸಾರುಲ್ ಹಖ್ ಹುದವಿ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಸ್ಸೈಯದ್ ಅಮೀರ್ ತಂಙಳ್ ಅಲ್ ಬುಖಾರಿ, ಕೋಶಾಧಿಕಾರಿ ಅಬುಸ್ವಾಲಿಹ್ ಹಾಜಿ ಕುರಿಯಕ್ಕಾರ್ ಉಪಸ್ಥಿತರಿದ್ದರು.
Next Story





