ಮಂಗಳೂರು: ಹಮಾಲಿ ಕಾರ್ಮಿಕರ ಮೆರವಣಿಗೆ
ಮಂಗಳೂರು, ಮಾ.23: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಮುಷ್ಕರ ನಡೆಸುತ್ತಿದ್ದ ಅಂಗನವಾಡಿ ನೌಕರರಿಗೆ ಬೆಂಬಲ ಸೂಚಿಸಿ ಮಂಗಳೂರು ಬಂದರ್ ದಕ್ಕೆಯಲ್ಲಿ ಬಂದರ್ ಶ್ರಮಿಕರ ಸಂಘದ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಗುರುವಾರ ಮೆರವಣಿಗೆ ನಡೆಸಿದರು. ಸರಕಾರದ ಕಾರ್ಯವೈಖರಿಯ ವಿರುದ್ಧ ಘೋಷಣೆ ಕೂಗಿದರು.
ಬಂದರ್ ಶ್ರಮಿಕ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಮುಖಂಡರಾದ ಬಿ.ಕೆ.ಇಮ್ತಿಯಾಝ್ ಎಂ.ಆರ್. ಇಸ್ಮಾಯೀಲ್ ಇರಾ, ಚಂದ್ರಹಾಸ ಬಬ್ಬುಕಟ್ಟೆ, ಹಸನ್ ಮೋನು ಬೆಂಗರೆ, ಮಾಧವ ಕಾವೂರು, ಹರೀಶ್ ಕೆರೆಬೈಲ್ ಮತ್ತಿತರರು ಪಾಲ್ಗೊಂಡಿದ್ದರು.
Next Story





