ಪುಣೆ ತಂಡಕ್ಕೆ ಇಮ್ರಾನ್ ತಾಹಿರ್ ಸೇರ್ಪಡೆ

ಹೊಸದಿಲ್ಲಿ, ಮಾ.23: ದಕ್ಷಿಣ ಆಫ್ರಿಕದ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ 10ನೆ ಆವೃತ್ತಿಯ ಐಪಿಎಲ್‌ನಲ್ಲಿ ಕೊನೆಗೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಗಾಯಾಳು ಆಸೀಸ್‌ನ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಬದಲಿಗೆ ತಾಹಿರ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಸೇರ್ಪಡೆಯಾಗಿದ್ದಾರೆ.
ಈ ವರ್ಷದ ಐಪಿಎಲ್ ಹರಾಜಿನಲ್ಲಿ ವಿಶ್ವದ ನಂ.1 ಬೌಲರ್ ತಾಹಿರ್‌ರನ್ನು ಯಾವ ಫ್ರಾಂಚೈಸಿಗಳು ಖರೀದಿಸಲು ಮುಂದಾಗದೇ ಅಚ್ಚರಿ ಮೂಡಿಸಿದ್ದವು. ಮಾರ್ಷ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ನೊಂದಾಯಿತ ಲಭ್ಯ ಆಟಗಾರರ ಪಟ್ಟಿಯಲ್ಲಿದ್ದ ತಾಹಿರ್‌ರನ್ನು ಪುಣೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಭುಜನೋವಿಗೆ ತುತ್ತಾಗಿದ್ದ ಮಾರ್ಷ್ ಈಗ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಟೆಸ್ಟ್ ಸರಣಿಯನ್ನು ತ್ಯಜಿಸಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಮಾರ್ಷ್ 9 ತಿಂಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರವಿರಲಿದ್ದಾರೆ ಎಂದು ಆಸ್ಟ್ರೇಲಿಯ ಮಾಧ್ಯಮಗಳು ವರದಿ ಮಾಡಿದ್ದವು.
Next Story





