ನಪಂ ಮಳಿಗೆಗಳು ಒಳ ಬಾಡಿಗೆಗೆ: ಕ್ರಮಕ್ಕೆ ಸದಸ್ಯರ ಒತ್ತಾಯ
ಸುಳ್ಯ ನಪಂ ವಿಶೇಷ ಸಾಮಾನ್ಯ ಸಭೆ
ಸುಳ್ಯ, ಮಾ.23: ನಗರ ಪಂಚಾಯತ್‌ನ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದು ಅದನ್ನು ಒಳ ಬಾಡಿಗೆಗೆ ಬೇರೆಯವರಿಗೆ ನೀಡಲಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ.
ನಪಂ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆಯಲ್ಲಿ ನಡೆದ ನಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ನಗರ ಪಂಚಾಯತ್‌ನ ವಾಣಿಜ್ಯ ಮಳಿಗೆಗಳನ್ನು ಏಲಂ ಮಾಡುವ ಕುರಿತು ಚರ್ಚೆ ನಡೆಯಿತು. ವಾಣಿಜ್ಯ ಮಳಿಗೆಗಳನ್ನು ಪಡದವರು ಸ್ವತಃ ಆ ಕೊಠಡಿಯಲ್ಲಿ ನಡೆಸುವುದಾಗಿ ಹೇಳಿ ಲೈಸೆನ್ಸ್ ಪಡೆದ ಅದೇ ವ್ಯವಹಾರವನ್ನೇ ನಡೆಸಬೇಕು. ಈಗ ಹಲವರು ಬಾಡಿಗೆಗೆ ಪಡೆದು ಕೊಠಡಿಗಳನ್ನು ಹೆಚ್ಚಿನ ದರಕ್ಕೆ ಒಳ ಬಾಡಿಗೆಗೆ ಬೇರೆಯವರಿಗೆ ಬಾಡಿಗೆಗೆ ನೀಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಕಟ್ಟು ನಿಟ್ಟಿನ ಕ್ರಮ ಜರಗಿಸ ಬೇಕೆಂದು ಸದಸ್ಯ ಕೆ.ಗೋಕುಲ್‌ದಾಸ್ ಒತ್ತಾಯಿ ಸಿದರು. ಈಗಾಗಲೇ ಬಾಡಿಗೆಗೆ ನೀಡಿರುವ ಮಳಿಗೆ ಗಳಲ್ಲಿ ಇರುವವರ ವಿವರವನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸರಕಾರಿ ಸುತ್ತೋಲೆಯಂತೆ ಕೊಠಡಿಗಳನ್ನು ಏಲಂ ಮಾಡಿ 12 ವರ್ಷಗಳಿಗೆ ಬಾಡಿಗೆ ನೀಡಲಾಗುವುದು ಎಂದು ಮುಖ್ಯಾಕಾರಿ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು 3 ಅಥವಾ 5 ವರ್ಷಗಳಿಗೆ ಬಾಡಿಗೆಗೆ ನೀಡಬೇಕು ಎಂದು ಆಗ್ರಹಿಸಿದರು. ಸರಕಾರದಿಂದ ಸ್ಪಷ್ಟ ಆದೇಶ ಇದೆ ಮತ್ತು ಹಿಂದೆಯೂ ಅದೇ ರೀತಿ ಮಾಡ ಲಾಗಿತ್ತು. ಈ ಕುರಿತು ಚರ್ಚೆ ನಡೆದು ಗರಿಷ್ಠ ಠೇವಣಾತಿಯ ಮೇರೆಗೆ 12 ವರ್ಷಗಳಿಗೆ ಬಾಡಿಗೆಗೆ ನೀಡಲು ನಿರ್ಧರಿಸ ಲಾಯಿತು.
- ಕಡಿಮೆ ಮೊತ್ತಕ್ಕೆ ಮೀನು ಮಾರುಕಟ್ಟೆ ಏಲಂ: ಆಕ್ಷೇಪ
ನಗರದಲ್ಲಿನ ಹಸಿ ಮೀನು ಮಾರುಕಟ್ಟೆ ಯನ್ನು ಕಳೆದ ವರ್ಷದ ಏಲಂ ಮೊತ್ತಕ್ಕಿಂತ ಅರ್ಧ ದರಕ್ಕೆ ನೀಡಲಾಗಿದೆ. ಇದರಿಂದ ನಗರ ಪಂಚಾಯತ್‌ಗೆ ನಷ್ಟ ಉಂಟಾಗಿದೆ. ಅದನ್ನು ಮರು ಏಲಂ ಮಾಡಬೇಕೆಂದು ಸದಸ್ಯ ಪ್ರಕಾಶ್ ಹೆಗ್ಡೆ ಆಗ್ರಹಿಸಿ, ಕಳೆದ ವರ್ಷ ಆರು ಸ್ಟಾಲ್‌ಗಳನ್ನು 30 ಲಕ್ಷಕ್ಕೆ ಏಲಂ ಆಗಿದ್ದರೆ, ಈ ವರ್ಷ 16.85 ಲಕ್ಷಕ್ಕೆ ಏಲಂ ಆಗಿದೆ ಎಂದರು.
ಈ ಕುರಿತು ಚರ್ಚೆ ನಡೆದು ಮರು ಏಲಂ ನಡೆಸುವುದಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಮೀನು ಮಾರುಕಟ್ಟೆಯ ಏಲಂ ದರದಲ್ಲಿ ಕಡಿಮೆ ಉಂಟಾಗಿರುವುದರ ಲಾಭ ಗ್ರಾಹಕರಿಗೆ ದೊರೆಯಬೇಕೆಂದು ಸದಸ್ಯರಾದ ಕೆ.ಎಂ.ಮುಸ್ತಾ, ಕೆ.ಗೋಕುಲ್‌ದಾಸ್, ಪ್ರೇಮ ಟೀಚರ್ ಮತ್ತಿತರರು ಆಗ್ರಹಿಸಿದರು. ಉಳಿದ ಕಡೆಗಳ ಮೀನು ಮಾರುಕಟ್ಟೆಯ ಏಲಂ ದರಕ್ಕೆ ಹೋಲಿಸಿದರೆ ಸುಳ್ಯದಲ್ಲಿ ಈಗಲೂ ಹೆಚ್ಚಿದೆ. ಕಳೆದ ವರ್ಷ ಕೆಲವು ಒತ್ತಡದಿಂದಾಗಿ ಏಲಂ ದರವನ್ನು ಏರಿಸಲಾಗಿತ್ತು. ಇದರಿಂದ ಮೀನಿನ ದರ ಏರಿತ್ತು ಎಂದು ಸದಸ್ಯರು ಹೇಳಿದರು. ಮೀನಿಗೆ ಅಕ ದರ ವಿಸದೆ ನ್ಯಾಯಯುತ ಬೆಲೆ ವಿಸಲು ಸೂಚಿಸುವಂತೆ ಸದಸ್ಯರು ಆಗ್ರಹಿಸಿದರು. ಈ ಕುರಿತ ಸಾಮಾನ್ಯ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಯಿತು.
2016-17ನೆ ಸಾಲಿನ 14ನೆ ಹಣಕಾಸು, ಎಸ್‌ಎ್ಸಿ, 13ನೆ ಹಣಕಾಸು ಹಾಗೂ ನಗರ ಪಂಚಾಯತ್ ನಿಯ ಅನುದಾನದ ಕಾಮಗಾರಿಯ ಟೆಂಡರ್ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
- ಪ್ಲಾಸ್ಟಿಕ್ ಸೌಧ ನಾಶ- ಕ್ರಮಕ್ಕೆ ಆಗ್ರಹ
ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಕಸ ವಿಲೇವಾರಿಗೆ ಗಾಂ ನಗರದಲ್ಲಿ 35 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಪ್ಲಾಸ್ಟಿಕ್ ಸೌಧವನ್ನು ನಾಶ ಮಾಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ಹೆಗ್ಡೆ ಆಗ್ರಹಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಮುಖ್ಯಾಕಾರಿ ಚಂದ್ರಕುಮಾರ್ ತಿಳಿಸಿದರು.
ನಪಂ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಎನ್.ಎ.ರಾಮಚಂದ್ರ, ರಮಾನಂದ ರೈ, ಮೀನಾಕ್ಷಿ, ಗಿರೀಶ್ ಕಲ್ಲುಗದ್ದೆ, ಗೋಪಾಲ ನಡುಬೈಲು, ಸುನಿತಾ ಡಿಸೋಜ, ಜಾನಕೀ ನಾರಾಯಣ, ಶಿವಕುಮಾರ್ ಕಂದಡ್ಕ, ಶ್ರೀಲತಾ ಪ್ರಸನ್ನ ಚರ್ಚೆಯಲ್ಲಿ ಉಪಸ್ಥಿತರಿದ್ದರು.







