ಗಂಗೊಳ್ಳಿ, ಬೈಂದೂರಿಗೆ ಬೆಂಗಳೂರು ಬಸ್
ಮಂಗಳೂರು, ಮಾ.23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಗಳನ್ನು ಸಂಸ್ಥೆಯ ಬೆಂಗಳೂರು ಕೆಂದ್ರೀಯ ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲ/ಉತ್ತಮ ಸೇವೆಗಾಗಿ ಮಾ.24ರಿಂದ ಬೆಂಗಳೂರು-ಬೈಂದೂರು ಮತ್ತು ಬೆಂಗಳೂರು-ಗಂಗೊಳ್ಳಿ ಮಧ್ಯೆ ಹಾಸನ, ಮಂಗಳೂರು, ಕುಂದಾಪುರ ಮಾರ್ಗದಲ್ಲಿ ಸ್ಕಾನಿಯಾ ಡೈಮಂಡ್ ಕ್ಲಾಸ್ ಬಸ್ ಸಾರಿಗೆಗಳನ್ನು ಪ್ರಾರಂಭಿಸಲಾಗಿದೆ.
ಬೆಂಗಳೂರಿನಿಂದ ಪ್ರತೀ ದಿನ ರಾತ್ರಿ 9:40ಕ್ಕೆ ಹಾಗೂ ಬೈಂದೂರಿನಿಂದ ಸಂಜೆ 7:15ಕ್ಕೆ ಹೊರಡಲಿದೆ. ಇನ್ನೊಂದು ಬಸ್ ಬೆಂಗಳೂರಿನಿಂದ ರಾತ್ರಿ 10:10ಕ್ಕೆ ಹಾಗೂ ಗಂಗೊಳ್ಳಿಯಿಂದ ರಾತ್ರಿ 8ಕ್ಕೆೆ ಹೊರಡಲಿದೆ ಎಂದು ವಿಭಾಗೀಯ ನಿಯಂತ್ರಣಾಕಾರಿಗಳ ಪ್ರಕಟನೆ ತಿಳಿಸಿದೆ.
Next Story





