ಎಂಡೋ ಸಂತ್ರಸ್ತರಿಗೆ 56.76 ಕೋ.ರೂ. ಧನ ಸಹಾಯ
ಕಾಸರಗೋಡು, ಮಾ.23: ಎಂಡೋಸಲಾನ್ ಸಂತ್ರಸ್ತರಿಗೆ ಮೂರನೆ ಹಂತದಲ್ಲಿ 56.76 ಕೋ.ರೂ. ಮಂಜೂರುಗೊಳಿಸಲು ಕೇರಳ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಂತ್ರಸ್ತ ಪಟ್ಟಿಯಲ್ಲಿ ಒಳಗೊಂಡ ಹಾಸಿಗೆ ಹಿಡಿದ, ಬುದ್ಧಿಮಾಂದ್ಯತೆ ಹೊಂದಿದವರು ಹಾಗೂ ಮೃತರ ಆಶ್ರಿತರಿಗೆ ತಲಾ 5 ಲಕ್ಷ ರೂ, ಶಾರೀರಿಕ ವೈಕಲ್ಯ ಹೊಂದಿದ, ಕ್ಯಾನ್ಸರ್ ರೋಗಿಗಳಿಗೆ ತಲಾ 3 ಲಕ್ಷ ರೂ. ನೀಡಲು ಸರಕಾರ ಈ ಹಿಂದೆ ತೀರ್ಮಾನ ತೆಗೆದುಕೊಂಡಿತ್ತು. ಅದರಂತೆ ಮೊದಲ ಮತ್ತು ಎರಡನೆ ಹಂತದ ಹಣವನ್ನು ವಿತರಿಸಲಾಗಿದೆ. ಉಳಿದವರಿಗೆ ಮೂರನೆ ಹಂತದಲ್ಲಿ ಪರಿಹಾರ ಧನ ಒದಗಿಸಲಾಗಿದೆ.
ಹಾಸಿಗೆ ಹಿಡಿದ 257 ಮಂದಿಗೆ ವಿತರಿಸಲು ಒಟ್ಟು 5.14 ಕೋ.ರೂ. ಧನ ಸಹಾಯದಲ್ಲಿ ಬುದ್ಧಿಮಾಂದ್ಯತೆ ಉಂಟಾದ 1,161 ಮಂದಿಗೆ ತಲಾ 2 ಲಕ್ಷ ರೂ. ನೀಡಲು ಒಟ್ಟು 23.22 ಕೋ.ರೂ., ಶಾರೀರಿಕ ಅಂಗವೈಕಲ್ಯ ಹೊಂದಿದ 985 ಮಂದಿಗೆ ಒಟ್ಟು 9.85 ಕೋ.ರೂ., 437 ಕ್ಯಾನ್ಸರ್ ರೋಗಿಗಳಿಗೆ ತಲಾ 1 ಲಕ್ಷ ರೂ.ನಂತೆ ಒಟ್ಟು 4.37 ಕೋ.ರೂ ., ಮೃತರ ಆಶ್ರಿತ 709 ಮಂದಿಗೆ 2 ಲಕ್ಷ ರೂ.ನಂತೆ ಒಟ್ಟು 14. 18 ಕೋ.ರೂ. ಒದಗಿಸಲಾಗಿದೆ.
Next Story





