ಕ್ವಿಂಟನ್ ಡಿಕಾಕ್‌ಗೆ ಗಾಯ, ಐಪಿಎಲ್‌ನಲ್ಲಿ ಆಡುವುದು ಅನುಮಾನ
ವೆಲ್ಲಿಂಗ್ಟನ್, ಮಾ.23: ದಕ್ಷಿಣ ಆಫ್ರಿಕದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಬೆರಳು ನೋವಿನಿಂದ ಬಳಲುತ್ತಿದ್ದು ನ್ಯೂಝಿಲೆಂಡ್ ವಿರುದ್ಧ ಮೂರನೆ ಟೆಸ್ಟ್‌ನಲ್ಲಿ ಆಡುವುದು ಅನುಮಾನ. ಮುಂಬರುವ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯೂ ಇದೆ.
ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್‌ನಲ್ಲಿ ಶನಿವಾರ ಆರಂಭವಾಗಲಿರುವ ಮೂರನೆ ಟೆಸ್ಟ್ ಮುನ್ನಾದಿನ ಡಿಕಾಕ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಹೊಸ ಆಟಗಾರ ಹೆನ್ರಿಕ್ ಕ್ಲಾಸನ್ ಅವಕಾಶ ಪಡೆಯುವ ನಿರೀಕ್ಷೆಯಿದೆ.
ಡಿಕಾಕ್ ಬುಧವಾರ ಹ್ಯಾಮಿಲ್ಟನ್‌ನಲ್ಲಿ ಎಕ್ಸ್‌ರೇಗೆ ಒಳಪಟ್ಟಿದ್ದು, ಎಕ್ಸ್‌ರೇಯಲ್ಲಿ ಬೆರಳಿನಲ್ಲಿ ಯಾವುದೇ ಮುರಿತವಾಗಿಲ್ಲ. ಆದರೆ ಅಸ್ಥಿರಜ್ಜುವಿಗ ಹಾನಿಯಾಗಿದ್ದು ಗೊತ್ತಾಗಿದೆ. ಡಿಕಾಕ್ ವೆಲ್ಲಿಂಗ್ಟನ್‌ನಲ್ಲಿ ನಡೆದ 2ನೆ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು.
‘‘ಡಿಕಾಕ್‌ಗೆ ಗಾಯದಿಂದ ಚೇತರಿಸಿಕೊಳ್ಳಲು ನಾಲ್ಕರಿಂದ ಆರು ವಾರಗಳ ಅಗತ್ಯವಿದೆ. ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡುವ ಬಗ್ಗೆ ಸಂಶಯವಿದೆ. ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಲಭ್ಯವಿರುವ ಬಗ್ಗೆಯೂ ಖಚಿತತೆಯಿಲ್ಲ’’ಎಂದು ದಕ್ಷಿಣ ಆಫ್ರಿಕದ ಮ್ಯಾನೇಜರ್ ಹಾಗೂ ಟೀಮ್ ಡಾಕ್ಟರ್ ಮುಹಮ್ಮದ್ ಮೂಸಾಜೀ ಹೇಳಿದ್ದಾರೆ.
ಇದೇ ವೇಳೆ, ನ್ಯೂಝಿಲೆಂಡ್‌ನ ವೇಗದ ಬೌಲರ್ ಟಿಮ್ ಸೌಥಿ ಕೂಡ ಸ್ನಾಯು ಸೆಳೆತದಿಂದಾಗಿ ಮೂರನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಸೌಥಿಗೆ ವೆಲ್ಲಿಂಗ್ಟನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೂರನೆ ಟೆಸ್ಟ್ ಪಂದ್ಯದ ವೇಳೆ ಗಾಯವಾಗಿತ್ತು. ಸ್ಕಾನಿಂಗ್‌ನಲ್ಲಿ ಗಾಯವಾಗಿರುವುದು ದೃಢಪಟ್ಟಿತ್ತು.







