ಪ್ರತಿಕೃತಿ ಸುಟ್ಟವರೂ ಅವರೇ, ಕ್ಲೀನ್ ಮಾಡಿದವರೂ ಅವರೇ !

ಚಿಕ್ಕಮಗಳೂರು, ಮಾ.24: ಕಾವೇರಿ ವಿಚಾರದಲ್ಲಿ ಕನ್ನಡಗರ ವಿರುದ್ದ ಅವಹಳೇನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತಮಿಳು ನಟ ಸತ್ಯರಾಜ್ ವಿರುದ್ದ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದ ಬಳಿ ಪ್ರತಿಕೃತಿ ಧಹಿಸುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಾಹುಬಲಿ 2 ಚಿತ್ರದಲ್ಲಿ ಸತ್ಯರಾಜ್ ಅಭಿಯನಸಿದ್ದು ಆ ಚಿತ್ರವನ್ನು ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಬಿಡುಗಡೆಗೊಳಿಸಿದಂತೆ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಆದ ಚಿಕ್ಕಮಗಳೂರು-ಕಡೂರು ರಸ್ತೆ ತಡೆ ನಡೆಸಲು ಮುಂದಾದ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಆದರೆ, ಇದೇ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೆ ಅನುಮತಿ ಪಡೆಯದೇ ಪ್ರತಿಕೃತಿ ದಹನ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕೃತಿ ದಹಿಸಿದ ವಸ್ತುಗಳನ್ನು ಪೊಲೀಸರು ಕರವೇ ಕಾರ್ಯಕರ್ತರ ಕೈಯಲ್ಲೇ ಕ್ಲೀನ್ ಮಾಡಿಸಿದರು.
Next Story





