ಚಾಲಕನ ನಿಯಂತ್ರಣ ತಪ್ಪಿದ ಬಸ್: ಓರ್ವ ಸಾವು

ತುಮಕೂರು.ಮಾ.24:ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಚಲಿಸಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸಂಜೆ ಕೊರಟಗೆರೆ ತಾಲೂಕು ಥರಟಿ ಗ್ರಾಮದ ಬಳಿ ನಡೆದಿದೆ.
ತುಮಕೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದ ಎಂ.ಎ.ಜಿ. ಖಾಸಗಿ ಬಸ್ ಥರಟಿ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಚಲಿಸಿದ್ದು, ರಸ್ತೆ ಬದಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಹನುಮೇನಹಳ್ಳಿ ರಾಜಣ್ಣ(48) ಢಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Next Story





