ತೊಕ್ಕೊಟ್ಟು: ಅಕ್ರಮ ಜುಗಾರಿ ಅಡ್ಡೆಗೆ ದಾಳಿ; 12 ಜುಗಾರಿಕೋರರ ಬಂಧನ

ಉಳ್ಳಾಲ, ಮಾ.24: ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಗೆ ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಧಿಢೀರ್ ದಾಳಿ ನಡೆಸಿದ ಪೊಲೀಸರು 12 ಜುಗಾರಿಕೋರರನ್ನು ಬಂಧಿಸಿ, 23,700 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ತೊಕ್ಕೊಟ್ಟಿನ ಒಳಪೇಟೆಯಲ್ಲಿ ಮಾಜಿ ಧಾರ್ಮಿಕ ಪರಿಷತ್ ಸದಸ್ಯರೋರ್ವರಿಗೆ ಸೇರಿರುವ ದತ್ತಕೃಪಾ ಹೆಸರಿನ ವಾಣಿಜ್ಯ ಕಟ್ಟಡದಲ್ಲಿ ಅಕ್ರಮ ಜೂಜು ಅಡ್ಡೆ ನಡೆಯುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಅವರು ತನ್ನ ತಂಡದೊಂದಿಗೆ ಧಿಢೀರ್ ದಾಳಿ ನಡೆಸಿದ್ದಾರೆ.
ದಾಳಿ ಸಂಧರ್ಭದಲ್ಲಿ 12 ಮಂದಿ ಜೂಜಿನಲ್ಲಿ ನಿರತರಾಗಿದ್ದು ಎಲ್ಲರನ್ನೂ ಬಂಧಿಸಲಾಗಿದ್ದು ಅವರಿಂದ 23,700 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಉಳ್ಳಾಲ ಪೊಲೀಸ್ ಸಿಬ್ಬಂದಿಗಳಾದ ರಾಜಾರಾಮ್, ಮಹೇಶ್ ಗಟ್ಟಿ, ಬಸವರಾಜ್ ,ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Next Story





