ಇಂದು ‘ಐಜಿಬಿಸಿ ಗ್ರೀನ್ ಕ್ವೆಸ್ಟ್ ’
ಬೆಂಗಳೂರು, ಮಾ.24: ಸಿಐಐ- ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ಬೆಂಗಳೂರು ಘಟಕದ ಆಶ್ರಯದಲ್ಲಿ ‘ಗ್ರೀನ್ ಕ್ವೆಸ್ಟ್’ ಕಾರ್ಯಕ್ರಮವು ಮಾ.25ರಂದು ಬೆಂಗಳೂರಿನ ರೆಸಿಡೆನ್ಶಿ ರಸ್ತೆಯಲ್ಲಿರುವ ಗುಡ್‌ಶೆರ್ಡ್ ಆಡಿಟೋರಿಯಂನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಎರಡು ತಾಂತ್ರಿಕ ಅವೇಶನಗಳಿದ್ದು ‘ಗ್ರೀನ್ ಬಿಲ್ಡಿಂಗ್’ ಮತ್ತು ‘ಗ್ರೀನ್ ಸಿಟಿ’ಯ ತಜ್ಞರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ‘ಗ್ರಾಮೀಣ ಘನತ್ಯಾಜ್ಯ ನಿರ್ವಹಣೆ’ ಹಾಗೂ ‘ದಕ್ಷ ಸಂಚಾರ ನಿರ್ವಹಣಾ ವ್ಯವಸ್ಥೆ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಸರ್ದೆಗಳನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭ ಐಜಿಬಿಸಿ ವಿದ್ಯಾರ್ಥಿ ಘಟಕಕ್ಕೆ ಚಾಲನೆ ನೀಡಲಾಗುವುದು ಎಂದು ಐಜಿಬಿಸಿ ಬೆಂಗಳೂರು ಘಟಕದ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





