ಗಾರೆ ಕಾರ್ಮಿಕನ ಕೊಲೆ

ಕೊರಟಗೆರೆ, ಮಾ.25: ಗಾರೆ ಕೆಲಸ ಮಾಡಿಕೊಂಡಿದ್ದ ಯುವಕನೋರ್ವನನ್ನು ಕೊಲೆಗೈದು ಸೇತುವೆಗೆ ನೇತು ಹಾಕಿರುವ ಘಟನೆ ತಾಲೂಕಿನ ಭದ್ರಯ್ಯನಪಾಳ್ಯ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಭದ್ರಯ್ಯನಪಾಳ್ಯ ಗ್ರಾಮದ ಹನುಮಂತರಾಯಪ್ಪಎಂಬವರ ಪುತ್ರ ಸಿದ್ದರಾಜು(20) ಕೊಲೆಯಾದವರು. ಗಾರೆ ಕೆಲಸ ಮಾಡಿಕೊಂಡಿದ್ದ ಇವರನ್ನು ದುಷ್ಕರ್ಮಿಗಳು ಕೊಲೆಗೈದು ರಸ್ತೆ ಬದಿಯ ಸೇತುವೆಗೆ ನೇತು ಹಾಕಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿದಿದೆ.
Next Story





